ಬೆಳಗಾವಿ :ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನವನ್ನು ಸೆ.17 ರಿಂದ ಅಕ್ಟೋಬರ್ 2ರ ವರೆಗೂ ರಕ್ತಧಾನ ಶಿಬಿರ ಹಮ್ಮಿಕೊಂಡಿದ್ದು ಯುವಕರು ರಕ್ತಧಾನ ಮಾಡಿ ಜೀವ ಉಳಿಸಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ ಹೇಳಿದರು.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ದೇಶದ ಉದ್ದಗಲಕ್ಕೂ ರಕ್ತಧಾನ ಶಿಬಿರ, ಆರೋಗ್ಯ ತಪಾಸಣೆ ಮತ್ತು ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡುವ ಕಾರ್ಯಕ್ರಮ. ಅಲ್ಲದೆ, ಸ್ವಚ್ಚ ಭಾರತದ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗಿಯಾಗಿ ಜಾಗೃತಿ ಮೂಡಿಸುವುದು. ಯಾವ ಗ್ರಾಮದಲ್ಲಿ ಶೌಚಾಲಯ ನಿರ್ಮಾಣವಾಗಿಲ್ಲ. ಆ ಗ್ರಾಮದಲ್ಲಿ ಶೌಚಾಲಯ ನಿರ್ಮಾಣ ಕಾರ್ಯಕ್ರಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.
ಕೆರೆ ಕಟ್ಟಡಗಳನ್ನು ಕಟ್ಟುವ ಕೆಲಸ ದೇಶದ ಉದ್ದಗಲಕ್ಕೂ ಅಭಿಯಾನದ ರೀತಿಯಲ್ಲಿ ಹಾಕಿಕೊಂಡಿದ್ದೇವೆ. ನರೇಂದ್ರ ಮೋದಿಜಿ ಅವರು ತಮ್ಮ ಜನ್ಮ ದಿನವನ್ನು ಆಚರಿಸಿಕೊಳ್ಳುವುದಿಲ್ಲ. ಅವರ ಜನ್ಮದಿಂದ ಗಾಂಧಿ ಜಯಂತಿ ವರೆಗೂ ಸಾಮಾಜಿಕ ಕಳಕಳಿ ಕಾಳಜಿಯಾಗಿ ಕೆಲಸ ಕಾರ್ಯಗಳನ್ನು ಸರಕಾರ ಮತ್ತು ಸಾರ್ವಜನಿಕರು ಸೇರಿ ಕೆಲಸ ಮಾಡುತ್ತಿದ್ದೇವೆ ಎಂದರು.