ಅಥಣಿ : ಕೊಲ್ಕತ್ತಾದಲ್ಲಿ ವೈದ್ಯಕೀಯ ನಿರತ ಮಹಿಳೆ ಮೇಲೆ ನಡೆದ ಘಟನೆ ತುಂಬಾ ಘೋರ ದುರ್ಘಟನೆಯಾಗಿದೆ, ಹಿಂದೆಂದೂ ಆಗದ ರೀತಿಯಾಗಿ ದುರಂತವಾಗಿದ್ದು ಎಂದು ಡಾ. ಮಲ್ಲಿಕಾರ್ಜುನ ಹಂಜಿ ಹೇಳಿದರು.
ಅವರು ಇಂದು ಸಂಜೆ ಇತ್ತಿಚಿಗೆ ಕೋಲ್ಕತಾದಲ್ಲಿ ವೈದ್ಯ ಮಹಿಳೆ ಮೇಲೆ ಜರುಗಿದ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಖಂಡಸಿ, ಭಾರತೀಯ ವೈದ್ಯಕೀಯ ಅಸೊಶಿಯೇಶನ್ ಅಥಣಿ ಘಟಕದಿಂದ ಮೇಣದ ಬತ್ತಿ ಹಿಡಿದು ಅಥಣಿ ಪಟ್ಟಣದ ಎಂ.ಜಿ ರಸ್ತೆಯಲ್ಲಿ ಮೆರವಣಿಗೆ ಮಾಡಿ ಮಾತನಾಡಿ, ನಮ್ಮ ಮನೆಯ ಹೆಣ್ಣುಮಕ್ಕಳನ್ನು ವೈದ್ಯಕೀಯ ಓದಿಸಿ ವೈದ್ಯರನ್ನಾಗಿ ಮಾಡುವುದು ಅಥವಾ ಬಿಡುವುದೊ ಎಂಬ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಕರ್ತವ್ಯನಿರತ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ವೈದ್ಯ ಮೇಲೆ ಅತ್ಯಾಚಾರ ಮಾಡಿದ್ದು ಅಪರಾಧ, ಈ ಅಪಾರಾಧವನ್ನು ಮುಚ್ಚಿ ಹಾಕಲು ಸಾಕ್ಷಿ ನಾಶ ಮಾಡಲು ಆಸ್ಪತ್ರೆ ದ್ವಂಸ ಮಾಡಿರುವದು ಅಲ್ಲಿನ ಸರಕಾರದ ನಾಚಿಕೆಗೇಡಿನ ಸಂಗತಿಯಾಗಿದೆ, ಕೇವಲ ವೈದ್ಯರು ಮಾತ್ರ ಪ್ರತಿಭಟಣೆ ಮಾಡುವುದು ಅಲ್ಲ ಇದು ಇಡೀ ಭಾರತ ದೇಶದ ಪ್ರತಿಯೊಬ್ಬರು ಸಹಕರಿಸಿ ಪ್ರತಿಭಟಿಸಿ ಅವರಿಗೆ ನ್ಯಾಯ ಕೊಡಿಸಬೇಕು ಎಂದರು.
ಹಿರಿಯ ವೈದ್ಯ ಡಾ ರಾಮ ಕುಲಕರ್ಣಿ ಅವರು ಮಾತನಾಡಿ, ಈ ಘಟನೆ ಖಂಡಿಸಿ ನಾಳೆ ಬೆಳಿಗ್ಗೆಯಿಂದ ಒಂದು ದಿನ ಪೂರ್ಣವಾಗಿ ಅಥಣಿಯಲ್ಲಿನ ಎಲ್ಲ ಆಸ್ಪತ್ರೆಗಳು ತುರ್ತು ಸೇವೆ ಹೊರತು ಪಡಿಸಿ ತಮ್ಮ ಸೇವೆಯನ್ನು ಬಂದ್ ಮಾಡಿದ್ದು ಎಲ್ಲ ಸಾರ್ವಜನಿಕರು ಸಹಕರಿಸಿ ಎಂದರು.
ಐ.ಎಂ.ಎ ಅದ್ಯಕ್ಷೆ ಡಾ ಸ್ಮೀತಾ ರವಿಂದ್ರ ಚೌಗಲಾ, ಡಾ.ಎ.ಎ.ಪಾಂಗಿ , ಡಾ ಚನ್ನಪ್ಪ.ಸಂಕ್ರಟ್ಟಿ, ಡಾ.ಪಿ.ಪಿ.ಮಿರಜಕರ, ಡಾ.ಜ್ಯೋತಿ ಪ್ರಕಾಶ ಕುಮಠಳ್ಳಿ, ಡಾ.ಅವಿನಾಶ ನಾಯಿಕ, ಡಾ.ಮಹೇಶ ಕಾಪಶಿ, ಡಾ.ಮುರಘೇಶ ಅವಟಿ, ಡಾ ಆನಂದ ಗುಂಜಿಗಾವಿ, ಡಾ ವಿಜಯಕುಮಾರ ಚೈನಿ, ಡಾ ರವಿ ಚೌಗಲಾ, ಡಾ ಸಂಜಯ ಪೂಜಾರಿ, ಡಾ ವಿಜಯ ಬುರ್ಲಿ, ಸೊಮೇಶ ವಾಂಗಿ ಸೇರಿದಂತೆ ಅನೇಕರಿದ್ದರು.
ವರದಿ : ರಾಹುಲ್ ಮಾದರ