ಉಚಗಾಂವ ಗ್ರಾಮದಲ್ಲಿ ರಾಯಣ್ಣ ಪುತ್ಥಳಿ,ಕನ್ನಡ ಧ್ವಜ ಹಾರಿಸಲು ಅನುಮತಿಗಾಗಿ ಪ್ರತಿಭಟನೆ

  • shivaraj B
  • 7 Aug 2024 , 1:41 PM
  • Belagavi
  • 831

ಬೆಳಗಾವಿ : ಇಲ್ಲಿನ ಉಚಗಾವಿಯಲ್ಲಿ ರಾಯಣ್ಣನ ಪುತ್ಥಳಿ ಹಾಗೂ ಕನ್ನಡ ಭಾವುಟಕ್ಕೆ ಅನುಮತಿ ಸಿಗದ ಹಿನ್ನಲೆಯಲ್ಲಿ ಕನ್ನಡಪರ ಸಂಘಟನೆಗಳು, ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿವೆ‌.

ತಾಲೂಕಿನ ಉಚಗಾಂವ ಗ್ರಾಮದಲ್ಲಿ ರಾಯಣ್ಣ ಪುತ್ಥಳಿ,ಕನ್ನಡ ಧ್ವಜ ಹಾರಿಸಲು ಅನುಮತಿ ನೀಡುವಂತೆ ಆಗ್ರಹಪಡಿಸುತ್ತಿದ್ದಾರೆ. 

ಉಚಗಾಂವ ಗ್ರಾಮದಲ್ಲಿ ರಾಯಣ್ಣ ಪುತ್ಥಳಿ ಹಾಗೂ ಕನ್ನಡ ಭಾವುಟಕ್ಕೆ ಪೋಲಿಸರ್ ವಿರೋಧ ಎನ್ನುವ ಆರೋಪಿಸಿ, ಬೆಳಗಾವಿಯಲ್ಲಿ ಕನ್ನಡಪರ ಹೋರಾಟಗಾರರ ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ಕರವೇ ಶಿವರಾಮೇಗೌಡ ಬಣ ಹಾಗೂ ಕರವೇ ಕನ್ನಡ ಸೇನೆ ವತಿಯಿಂದ ಪ್ರತಿಭಟನೆ ನಡೆಯುತ್ತಿದ್ದು, ಕರವೇ ಕನ್ನಡ ಸೇನೆ ರಾಜ್ಯಾಧ್ಯಕ್ಷ ಅನಿಲ್ ಕುಮಾರ, ಕರವೇ ಶಿವರಾಮೇಗೌಡ ವಾಜೀದ್ ಹಿರೇಕೂಡಿ,ಅನಿಲ ದಡ್ಡಿಮನಿ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ.

ಎಷ್ಟೇ ಮನವಿ‌ ಸಲ್ಲಿಸಿದರು ಉಚಗಾಂವ ಗ್ರಾಮದಲ್ಲಿ ಎರಡು ವರ್ಷದಿಂದ ಕನ್ನಡ ಭಾವಟ ಹಾರಿಸಲು ಅನುಮತಿ ಸಿಗುತ್ತಿಲ್ಲಾ .

ಕನ್ನಡಪರ ಹೋರಾಟಗಾರರು ಮತ್ತು ಪೋಲಿಸ್ ಮಧ್ಯೆ ವಾಗ್ವಾದ ನಡೆದು ನಾವು ಉಚಗಾಂವಕ್ಕೆ ಹೋಗಿ ಬರತೇವಿ ನಮ್ಮನ್ನ ಬಿಡಿ ಎಂದು ಕರವೇ ಮುಖಂಡರು ಆಗ್ರಹಿಸುತ್ತಿದ್ದಾರೆ.

Read All News