ಅದ್ದೂರಿಯಾಗಿ ಜರುಗಿದ ಆರ್ ಬಿ ಎಲ್ ಬ್ಯಾಂಕ್ 80ನೇ ವಾರ್ಷಿಕೋತ್ಸವ

  • Shivaraj Bandigi
  • 15 Jan 2024 , 12:35 PM
  • Belagavi
  • 288

ಗೋಕಾಕ : ಬ್ಯಾಂಕುಗಳ ಅಭಿವೃದ್ಧಿಗೆ ಗ್ರಾಹಕರೆ ಬಂಡವಾಳ ಅವರ ಸಹಕಾರದಿಂದ ಬ್ಯಾಂಕ್ ಪ್ರಗತಿಪತ್ತ ಸಾಗಲು ಸಾಧ್ಯ ಎಂದು ಆರ್ ಬಿ ಎಲ್ ಬ್ಯಾಂಕಿನ ಬೆಳಗಾವಿ ವಿಭಾಗೀಯ ವ್ಯವಸ್ಥಾಪಕ ನಂಜುಂಡಸ್ವಾಮಿ ಹಿರೇಮಠ ಹೇಳಿದರು. 

ಅವರು ಶುಕ್ರವಾರ  ಪಟ್ಟಣದ ಕೋರ್ಟ್ ಮುಂಭಾಗದಲ್ಲಿರುವ ಶಾಖೆಯಲ್ಲಿ ಬ್ಯಾಂಕಿನ 80ನೇ ಸಂಸ್ಥಾಪನಾ ಸಮಾರಂಭದಲ್ಲಿ ಮಾತನಾಡಿ, ಸ್ವಾತಂತ್ರ್ಯ ಪೂರ್ವ 1943 ರಲ್ಲಿ ಕೇವಲ ಎರಡು ಶಾಖೆಗಳಿಂದ ಆರಂಭವಾದ ಬ್ಯಾಂಕ್ ಇಂದು ದೇಶದ 28 ರಾಜ್ಯಗಳಲ್ಲಿ ಸುಮಾರು 580 ಕ್ಕೂ ಹೆಚ್ಚು ಶಾಖೆಗಳ ಹೊಂದಿ ಸೇವೆಯನ್ನು ಸಲ್ಲಿಸುತ್ತಿರುವದಕ್ಕೆ ಗ್ರಾಹಕರ ಸಹಕಾರವೇ ಪ್ರಮುಖ ಕಾರಣ ಎಂದರು. 

ಶಾಖಾ ವ್ಯವಸ್ಥಾಪಕ ಚಂದ್ರಗೌಡಾ ಪಾಟೀಲ ಸ್ವಾಗತಿಸಿ, ಮಾತನಾಡಿ, ಗೋಕಾಕ ಶಹರದಲ್ಲಿ 43 ವರ್ಷಗಳ ಹಿಂದೆ ಶಾಖೆಯನ್ನು ತೆರೆಯಲಾಗಿತ್ತು ಅಂದಿನಿಂದ ಇಂದಿನವರೆಗೂ ತಮ್ಮೆಲ್ಲ ಸಹಕಾರದಿಂದ ಶಾಖೆಯು ಅಭಿವೃದ್ಧಿ ಹೊಂದಿದ್ದು, ತಮ್ಮ ಸಹಾಯ ಸಹಕಾರ ಹೀಗೆ ಮುಂದುವರೆಯಲ್ಲಿ ಎಂದರು. 

ಗ್ರಾಹಕರ ಪರವಾಗಿ ಸಲೀಂ ಖೋಜಾ, ಮನೋಹರ ಜವರ ಮತ್ತು ಗಂಗಾಧರ ಕಳ್ಳಿಗುದ್ದಿ ತಮ್ಮ ಅನಿಸಿಕೆ ಹಂಚಿಕೊಂಡರು. 

ಸಂಸ್ಥೆಗಳ ಖಾತೆ ನಿರ್ವಹಣಾ ಮುಖ್ಯಸ್ಥ ಪ್ರಸಾದ ಬಾಸೂತ್ಕರ, ವಿಮಾ ವಿಭಾಗದ ಮುಖ್ಯಸ್ಥ ಸಂತೋಷ ಅಬ್ಬಿಗೇರಿ ಸೇರಿದಂತೆ ಬ್ಯಾಂಕಿನ‌ ಗ್ರಾಹಕರು ಮತ್ತು ಸಿಬ್ಬಂದಿ   ಇದ್ದರು. 

ರವಿಕಿರಣ್ ಯಾತಗೇರಿ ನಿರೂಪಿಸಿದರು. ದರಿಗೌಡ ಭುಜಗೌಡರ ವಂದಿಸಿದರು.

Read All News