ಬೆಳಗಾವಿ : ಸಂಘಟನೆಯ ರಾಜ್ಯಾಧ್ಯಕ್ಷ ಮಹೇಶ ಶಿಗಿಹಳ್ಳಿ ನೇತೃತ್ವದಲ್ಲಿ ಸವದತ್ತಿ, ಬೈಲಹೊಂಗಲ, ಯರಗಟ್ಟಿ, ರಾಯಬಾಗ, ಖಾನಾಪುರ, ಕಿತ್ತೂರು, ಬೆಳಗಾವಿ ಗ್ರಾಮೀಣ ಮತ್ತು ಬೆಳಗಾವಿ ನಗರ ಕಮಿಟಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಪದಗ್ರಹಣ ಮಾಡಲಾಯಿತು .
ನಂತರ ಮಾತನಾಡಿದ ರಾಜ್ಯಾಧ್ಯಕ್ಷ ಮಹೇಶ ಶೀಗಿಹಳ್ಳಿ, ವಾಲ್ಮೀಕಿ ಅಬಿವೃದ್ಧಿ ನಿಗಮದಲ್ಲಿ ನಡೆದಿರುವ 187 ಕೋಟಿ ಭ್ರಷ್ಟಾಚಾರ ವಿಷಯವಾಗಿ ಅಧಿಕಾರಿಗಳು ಮತ್ತು ಕೆಲವು ರಾಜಕಾರಣಿಗಳ ಹೆಸರನ್ನು ಡೆತ್ ನೋಟ್ ನಲ್ಲಿ ಬರೆದಿಟ್ಟು ಮೃತ ಪಟ್ಟ ನಿಗಮದ ಅಧಿಕಾರಿ ಚಂದ್ರಶೇಖರ್ ರವರ ಡೆತ್ ನೋಟ್ ನಂತೆ ಸರಿಯಾಗಿ ತನಿಖೆ ಆಗಿ ತಪ್ಪಿತಸ್ಥರ ಮೇಲೆ ಸರಿಯಾದ ಕ್ರಮ ಕೈಗೊಳ್ಳುವಂತೆ ಆಗ್ಹಿಸಿದರು.
ಯಾವುದೇ ಬಲಿಷ್ಠ ರಾಜಕಾರಣಿ ಆಗಿರಲಿ, ಅಧಿಕಾರಿಯಾಗಿರಲಿ ಮುಲಾಜ್ ಇಲ್ಲದೆ ಅವರನ್ನು ತನಿಖೆ ಮಾಡಿ ಶಿಕ್ಷೆ ನೀಡಲಿ ಎಂದರು.
ವಾಲ್ಮೀಕಿ ನಾಯಕ ಸಮುದಾಯಕ್ಕೆ ನ್ಯಾಯ ಸಿಗಲಿ ಮತ್ತು 187 ಕೋಟಿ ಭ್ರಷ್ಟಾಚಾರ ಹಣವನ್ನು ವಾಪಸ್ಸು ನಿಗಮಕ್ಕೆ ನಿಯೋಗ ಮಾಡಲೇಬೇಕು ಇಲ್ಲವಾದರೆ ಸರಕಾರದ ವಿರುದ್ಧ ಹೋರಾಟವನ್ನು ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮಲ್ಲೇಶ ಮೂಳಗಸಿ ರಾಜ್ಯ ಸಂಘಟನಾ ಕಾರ್ಯದರ್ಶಿ,ರಾಮ್ ಪೂಜಾರಿ ಬೆಳಗಾವಿ ಜಿಲ್ಲಾ ಗೌರವ ಅದ್ಯಕ್ಷ, ಶಕ್ತಿ ಶೀಗೀಹಳ್ಳಿ ಬೆಳಗಾವಿ ತಾಲೂಕು ಉಪಾಧ್ಯಕ್ಷ, ಮಂಜು ಸೀತಿಮನಿ ಬೆಳಗಾವಿ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ,ಮಂಜು ತಳವಾರ್
ಬೈಲಹೊಂಗಲ ತಾಲೂಕು ಅದ್ಯಕ್ಷ, ಬಸವರಾಜ್ ಪೂಜೇರಿ, ಸವದತ್ತಿ ತಾಲೂಕಿನ ಅಧ್ಯಕ್ಷ, ಮೇಘರಾಜ ಬೈಲವಾಡ, ಯರಗಟ್ಟಿ ತಾಲೂಕು ಅಧ್ಯಕ್ಷ,
ಆನಂದ್ ಊದಿ ಖಾನಾಪುರ ತಾಲೂಕಿನ ಅಧ್ಯಕ್ಷರಾಗಿ ಪದಗ್ರಹಣ ಮಾಡಿದರು. ಇತರೆ ತಾಲೂಕಿನ ಪದಾಧಿಕಾರಿಗಳು ಇದ್ದರು.