ಗಂಗಾವತಿ :ಗಂಗನಹಾಳ ಗ್ರಾಮದಲ್ಲಿ ಕರಡಿದಾಳಿಗೆ ಗಾಯಗೊಂಡಿರುವ ಮುಕ್ಕಲಪ್ಪ ನವಲಿ ಅವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಗಂಗಾವತಿ ವಿಧಾನ ಸಭಾ ಕ್ಷೇತ್ರದ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ವೈದ್ಯಾದಿಕಾರಿಗಳಿಗೆ ಸೂಚಿಸಿದ್ದಾರೆ.
ಗಂಗಾವತಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗಂಗನಹಾಳ ಗ್ರಾಮದಲ್ಲಿ ಕರಡಿ ದಾಳಿಗೆ ಒಳಪಟ್ಟು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುಕ್ಕಲಪ್ಪ ನವಲಿ ಆರೋಗ್ಯದ ಬಗ್ಗೆ ನಿಗಾವಹಿಸಲು ಜಿಲ್ಲಾ ಆಸ್ಪತ್ರೆಯ ವೈದ್ಯರೊಂದಿಗೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ದೂರವಾಣಿ ಮೂಲಕ ಚರ್ಚಿಸಿ ಸೂಕ್ತ ಚಿಕಿತ್ಸೆ ನೀಡುವಂತೆ ತಿಳಿಸಿದ್ದಾರೆ.
ಇರಕಲಗಡ ಭಾಗದಲ್ಲಿ ಕರಡಿ ಹಾವಳಿ ವ್ಯಾಪಕವಾಗಿದ್ದು, ಪದೇ ಪದೇ ಜನರು ಕರಡಿ ದಾಳಿಗೆ ತುತ್ತಾಗುತಿದ್ದಾರೆ. ಕರಡಿ ದಾಳಿಯಿಂದ ಜನರನ್ನು ರಕ್ಷಿಸಲು ಮತ್ತು ಕರಡಿಗಳು ಜನವಸತಿ ಕಡೆ ಬಾರದಂತೆ ನೋಡಿಕೊಳ್ಳಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇರಕಲಗಡ ಬಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕರಡಿಗಳು ಇದ್ದು, ಕರಡಿ ದಾಮ ನಿರ್ಮಾಣ ಮಾಡಬೇಕು ಎನ್ನುವುದು ಈ ಬಾಗದ ಜನರ ಒತ್ತಾಸೆಯಾಗಿದೆ. ಈ ಕುರಿತು ಅರಣ್ಯ ಇಲಾಖೆ ಸಚಿವ ಈಶ್ವರ ಕಂಡ್ರೆ ಅವರ ಜೊತೆ ಚರ್ಚಿಸಿ ಕರಡಿ ಮತ್ತು ಮಾನವನ ನಡುವೆ ನಡೆಯುತ್ತಿರುವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲು ಕೇಳಿಕೊಳ್ಳುತ್ತೇನೆ. ಅಷ್ಟೇ ಅಲ್ಲದೇ ಜನರ ಆಸೆಯಂತೆ ಈ ಬಾಗದಲ್ಲಿ ಕರಡಿ ದಾಮ ನಿರ್ಮಾಣ ಮಾಡಲು ಸಹ ಸಚಿವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.