ಬೆಳಗಾವಿ : ಸಿಎಂ ಸಿದ್ದರಾಮಯ್ಯರನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿ ಕೇಂದ್ರ ನಾಯಕರು ಹುನ್ನಾರ ಮಾಡ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ ಗುಂಡೂರಾವ್ ಹೇಳಿದರು.
ಅವರು ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಡಾ ಹಗರಣ ಸಂಬಂಧ ಸಿಎಂ ರಾಜೀನಾಮೆಗೆ ಆಗ್ರಹಿಸಿ ಮೈತ್ರಿ ಪಕ್ಷಗಳ ಪಾದಯಾತ್ರೆ ವಿಚಾರ ಹಾಸ್ಯಾಸ್ಪದವಾಗಿದೆ ಎಂದರು.
ಸಿದ್ದರಾಮಯ್ಯ ಕರ್ನಾಟಕದ ದೊಡ್ಡ ಧ್ವನಿ, ಕರ್ನಾಟಕಕ್ಕೆ ಅನ್ಯಾಯ ಆದಾಗ ಧ್ವನಿ ಎತ್ತಿದ್ದಾರೆ.
ತೆರಿಗೆ ರಾಜ್ಯದ ಪಾಲು ಪಡೆಯಲು ಸಿದ್ದರಾಮಯ್ಯ ದೆಹಲಿಗೆ ಹೋಗಿ ಪ್ರತಿಭಟನೆ ನಡೆಸಿದರು.ಬರ ಪರಿಹಾರ ಕೊಡದಿದ್ದಾಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಪರಿಹಾರ ಪಡೆದರು. ಬರ ಪರಿಹಾರ ಕೊಡದ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿತು ಹೇಗಾದರೂ ಮಾಡಿ ಸಿದ್ದರಾಮಯ್ಯರನ್ನು ಮುಗಿಸಲು ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ವಾಲ್ಮೀಕಿ ಹಗರಣದಲ್ಲಿ ಸಿದ್ದರಾಮಯ್ಯರನ್ನು ಸಿಲುಕಿಸಲು ಪ್ಲ್ಯಾನ್ ಮಾಡಿದ್ದರು ಅನಾವಶ್ಯಕವಾಗಿ ಸಿಬಿಐ ಎಂಟ್ರಿ ಕೊಟ್ಟಿತು, ಇಡಿಯಿಂದ ವಿಚಾರಣೆ ನಡೆಯುತ್ತಿದೆ ಇಡಿ ವಶದಲ್ಲಿರುವವರನ್ನು ಬೆದರಿಕೆ, ಪ್ರಚೋದಿಸಲಾಗುತ್ತದೆ ಎಂದು ಆರೋಪಿಸಿದ ಅವರು ಇಡಿ ಕೆಲಮಟ್ಟಕ್ಕೆ ಇಳಿದಿದೆ ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯನವರದ್ದು ಯಾವುದೇ ತಪ್ಪಿಲ್ಲ ಎಂದರು.
ಬಿಜೆಪಿ ನಾಯಕರು ಸಿದ್ದರಾಮಯ್ಯನವರ ಮೇಲೆ ಗೂಬೆ ಕೂರಿಸುವ ಹುನ್ನಾರ ಮಾಡುತ್ತಿದ್ದಾರೆ. ಬಿಎಸ್‌ವೈ ಸರ್ಕಾರದ ಅವಧಿಯಲ್ಲಿ ವಿಜಯೇಂದ್ರ ಸಾಕಷ್ಟು ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ. ಎಲ್ಲ ಫೈಲ್‌ಗಳನ್ನು ಮನೆಗಳಿಗೆ ತರೆಸಿಕೊಂಡು ಭ್ರಷ್ಟಾಚಾರ ಮಾಡಿದ್ದಾರೆ ಬಿಎಸ್‌ವೈ ಅವರ ನಕಲಿ ಸಹಿ ಕೂಡ ವಿಜಯೇಂದ್ರ ಮಾಡಿದ್ದರು ಎಂಬ ಆರೋಪಗಳಿವೆ ಎಂದರು.
ವಿಜಯೇಂದ್ರ ಯಾವ ರೀತಿ ನಡೆದುಕೊಂಡ್ರು ಎಂಬುದು ಇಡೀ ದೇಶಕ್ಕ ಗೊತ್ತಿದೆ.ಈಗ ಬಿಜೆಪಿ ನಾಯಕರಿಗೆ ಪಾದಯಾತ್ರೆ, ದಂಡಯಾತ್ರೆ ನಡೆಸುವ ಯಾವ ನೈತಿಕತೆ ಇದೆ? ಎಂದು ಪ್ರಶ್ನಿಸಿದ ಅವರು ಗಣಿಗಾರಿಕೆ ವಿರುದ್ಧ ನಾವೂ ಕೂಡ ಬೆಂಗಳೂರು ಟು ಬಳ್ಳಾರಿವರೆಗೆ ಪಾದಯಾತ್ರೆ ಮಾಡಿದ್ದೇವು, ಮೇಕೆದಾಟು ಹಾಗೂ ಕೃಷ್ಣೆಗಾಗಿ ಪಾದಯಾತ್ರೆ ಮಾಡಿದ್ದೇವೆ.ರಾಹುಲ್ ಗಾಂಧಿ ಕೂಡ ದೇಶಾದ್ಯಂತ ಸಂಚರಿಸಿ ಭಾರತ ಜೋಡೋ ರ್ಯಾಲಿ ಮಾಡಿದ್ದರು. ಈಗಿನ ಬಿಜೆಪಿ ಅಧ್ಯಕ್ಷ ವಿಜಯೇಂದ್ರರೇ ಭ್ರಷ್ಟಾಚಾರದ ಕಿಂಗ್.ಶೋಷಿತ ವರ್ಗದ ಧ್ವನಿಯಾಗಿರುವ ಸಿದ್ದರಾಮಯ್ಯ ಮುಗಿಸಲು ಬಿಜೆಪಿ ಪ್ಲ್ಯಾನ್ ಮಾಡಿದೆ.ರಾಜ್ಯಪಾಲರು ಕೂಡ ಬಿಜೆಪಿ ಹೈಕಮಾಂಡ್ ಸಲಹೆಯಂತೆ ಕೆಲಸ ಮಾಡುತ್ತಿದ್ದಾರೆ ಎಂದರು.
ಹಲವು ರಾಜ್ಯಗಳ ರಾಜ್ಯಪಾಲರನ್ನು ಬಿಜೆಪಿ ನಾಯಕರು ಈಗಾಗಲೇ ದುರುಪಯೋಗ ಮಾಡಿಕೊಂಡಿದೆ.
ನಮ್ಮ ರಾಜ್ಯಪಾಲರು ಕೂಡ ಬಿಜೆಪಿ ಹೈಕಮಾಂಡ್ ಆದೇಶದಂತೆ ನಡೆಯುತ್ತಿದ್ದಾರೆಂಬ ಅನುಮಾನಗಳಿವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾನೂನು ಹೋರಾಟದಲ್ಲಿ ಗೆಲ್ಲುತ್ತಾರೆ ಅವರ ನಾಯಕತ್ವವನ್ನು ನಾವೇ ಒಪ್ಪಿಕೊಂಡಿದ್ದೇವೆ, ಅವರೇ ಸಿಎಂ ಆಗಿ ಇರುತ್ತಾರೆ ಎಂದರು.
ಮುಡಾ ಪಾದಯಾತ್ರೆ ಸಂಬಂಧ ಬಿಜೆಪಿ, ಜೆಡಿಎಸ್ ಮಧ್ಯೆ ಒಡಕಿದೆ ಬಿಜೆಪಿ ಸರ್ಕಾರದ ಅವಧಿಯಲ್ಲೇ 50-50 ಸ್ಕೀಮ್ ಜಾರಿಗೆ ತರಲಾಗಿದೆ.ನಮ್ಮ ಸರ್ಕಾರ ಬಂದ ಮೇಲೆಯೇ ಈ ಸ್ಕೀಂ ರದ್ದುಗೊಳಿಸಿದ್ದೇವೆ.
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ತಪ್ಪಿಲ್ಲ, ಬಿಜೆಪಿ ಸರ್ಕಾರದಲ್ಲಿ ಈ ತಪ್ಪಾಗಿದೆ ಎಂದರು.