ಕಾಗವಾಡ: ತಾಲೂಕಿನ ಉಗಾರ ಪಟ್ಟಣದ ಸ್ವಕಚೇರಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಶಾಸಕ ರಾಜು ಕಾಗೆ ಮಾಜಿ ಶಾಸಕ ಶ್ರೀಮಂತ ಪಾಟೀಲ್ ವಿಚಾರವಾಗಿ ಕಿಡಿಕಾರಿದ್ದಾರೆ.
ನಿನ್ನೆ ಬಿಜೆಪಿ ಪ್ರತಿಭಟನಾ ರ್ಯಾಲಿಯಲ್ಲಿ ಹಾಲಿ ಶಾಸಕ ರಾಜು ಕಾಗೆ ವಿರುದ್ಧ ಆರೋಪದ ಸುರುಳಿಗೈದ ಶ್ರೀಮಂತ ಪಾಟೀಲ ಗೆ ಹಾಲಿ ಶಾಸಕ ರಾಜು ಕಾಗೆ ತಿರುಗೇಟನ್ನು ನೀಡಿದ್ದಾರೆ ವಿಧಾನಸಭಾ ಚುನಾವಣೆ ಬಳಿಕ ಸೋಲಿನ ರುಚಿ ಕಂಡ ಮಾಜಿ ಶಾಸಕ ಶ್ರೀಮಂತ ಪಾಟೀಲ್ ಮಾನಸಿಕವಾಗಿ ಕುಗ್ಗಿದ್ದಾರೆ ಅವರಿಗೆ ಒಳ್ಳೆಯ ಆಸ್ಪತ್ರೆಯ ಅವಶ್ಯಕತೆ ಇದೆ ಯಾರಾದ್ರೂ ಅವರಿಗೆ ಒಳ್ಳೆ ಆಸ್ಪತ್ರೆ ತೋರಿಸಿ ಚಿಕಿತ್ಸೆ ಕೊಡಿಸಿ.
ಇನ್ನೊಬ್ಬರ ಬಗ್ಗೆ ಅವಿವೇಕದ ಮಾತು ಸರಿಯಲ್ಲ ಎಂದು ಹಾಲಿ ಶಾಸಕ ರಾಜು ಕಾಗೆ ಮಾಜಿ ಶಾಸಕ ಶ್ರೀಮಂತ ಪಾಟೀಲ್ ಗೆ ಲೇವಡಿ ಮಾಡಿದ್ದಾರೆ
ವರದಿ : ರಾಹುಲ್