ದೆಹಲಿ :ವಿಶ್ವ ಹಿಂದೂ ಸಂಘಟನೆಯ ಕೇಂದ್ರ ಕಾರ್ಯಾಧ್ಯಕ್ಷ ಮತ್ತು ಹಿರಿಯ ವಕೀಲ ಅಲೋಕ್ ಕುಮಾರ್ ಅವರು ಎಸ್ ಎಚ್ ಹರ್ದೀಪ್ ಪುರಿರವರ ಹೇಳಿಕೆಯನ್ನು ನೋಡಿ ಆಘಾತಕ್ಕೊಳಗಾಗಿದ್ದೇವೆ ಎಂದು ಹೇಳಿದ್ದಾರೆ.
ಕೇಂದ್ರ ನಗರಾಭಿವೃದ್ಧಿ ಸಚಿವರಾದ ಹರ್ದೀಪ್ ಪುರಿ ರೋಹಿಂಗ್ಯಾಗಳನ್ನು ನಿರಾಶ್ರಿತರು ಎಂದು ಕರೆದಿದ್ದಾರೆ ಮತ್ತು ಅವರಿಗೆ ಬಕ್ಕರ್ವಾಲಾ, ದೆಹಲಿಯಲ್ಲಿ EWS ಫ್ಲಾಟ್‌ಗಳನ್ನು ಹಂಚಿದ್ದಾರೆ ಎಂದು ವಿಎಚಪಿ ಹೇಳಿದೆ.
ಕೇಂದ್ರ ಗೃಹ ಸಚಿವರ ಅಮಿತ ಶಾ ಹೇಳಿಕೆಯನ್ನು ಎತ್ತಿ ಹಿಡಿದ್ ವಿ ಎಚ ಪಿ ದಿನಾಂಕ್ 10.12.2020 ರಂದು ಸಂಸತ್ತಿನಲ್ಲಿ ಅಮಿತ್ ಶಾ ಅವರು ರೋಹಿಂಗ್ಯಾಗಳನ್ನು ಭಾರತದಲ್ಲಿ ಎಂದಿಗೂ ಸ್ವೀಕರಿಸಲಾಗುವುದಿಲ್ಲ (ರೋಹಿಗ್ಯಾ ಕೋ ಕಭಿ ಭೀ ಸ್ವೀಕರ್ ನಹಿ ಕಿಯಾ ಜೇಗಾ) ಎಂದು ಘೋಷಿಸಿದ್ದರು ಎಂದು ಹೇಳಿದೆ .
ರೋಹಿಂಗ್ಯಾಗಳು ನಿರಾಶ್ರಿತರಲ್ಲ, ನುಸುಳುಕೋರರು ಎಂದು ಅಲೋಕ್ ಕುಮಾರ್ ಹೇಳಿದ್ದಾರೆ ಮತ್ತು ಗೌರವಾನ್ವಿತ ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್ ಸೇರಿದಂತೆ ಭಾರತದ ಒಕ್ಕೂಟದ ಸ್ಥಿರ ನಿಲುವಾಗಿತ್ತು ಎಂದು ಹೇಳಿದೆ.
ಪಾಕಿಸ್ತಾನದಿಂದ ಬಂದ ಹಿಂದೂ ನಿರಾಶ್ರಿತರು ದೆಹಲಿಯ ಮಜ್ನು-ಕಾ-ತಿಲಾ ಪ್ರದೇಶದಲ್ಲಿ ಹೀನಾಯವಾಗಿ ಬದುಕುತ್ತಿದ್ದಾರೆ ಎಂಬುದು ಸತ್ಯ ಆದರೆ ರೋಹಿಂಗ್ಯಾಗಳಿಗೆ ಸೌಲಭ್ಯ ನೀಡುವುದು ಹೆಚ್ಚು ಶೋಚನೀಯವಾಗಿದೆ ಎಂದು ಅವರು ಹೇಳಿದರು.
VHP ಭಾರತ ಸರ್ಕಾರಕ್ಕೆ ಈ ಸಮಸ್ಯೆಯನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದೆ ಮತ್ತು ರೋಹಿಂಗ್ಯಾಗಳನ್ನು ಭಾರತದಿಂದ ವಾಪಸ್ ಕಳುಹಿಸಲು ವ್ಯವಸ್ಥೆ ಮಾಡಬೇಕೆಂದು ಹೇಳಿದೆ .