75 ಲಕ್ಷ ರೂ. ವೆಚ್ಚದಲ್ಲಿ ಮಾರಿಹಾಳ ಗ್ರಾಮದ ರಸ್ತೆಗಳ ಅಭಿವೃದ್ಧಿ

  • 15 Jan 2024 , 2:08 AM
  • Belagavi
  • 167

ಬೆಳಗಾವಿ: ಗ್ರಾಮೀಣ ಕ್ಷೇತ್ರದ ಮಾರಿಹಾಳ ಗ್ರಾಮದ ಒಳಾಂಗಣ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ಸಲುವಾಗಿ 75 ಲಕ್ಷ ರೂ,ಗಳನ್ನು‌ ಮಂಜೂರು ಮಾಡಿಸಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್,  ಕಾಮಗಾರಿಗೆ ಪೂಜೆ ನೆರವೇರಿಸಿದರು.

 ಕಾಂಕ್ರೀಟ್ ರಸ್ತೆಗಳ ನಿರ್ಮಾಣದ ಕಾಮಗಾರಿಗಳಿಗೆ ಗ್ರಾಮಸ್ಥರ ಉಪಸ್ಥಿತಿಯಲ್ಲಿ ಭೂಮಿ ಪೂಜೆಯನ್ನು ನೆರವೇರಿಸಿದ ಅವರು, ತ್ವರಿತಗತಿಯಲ್ಲಿ ಗುಣಮಟ್ಟದ ಕಾಮಗಾರಿ ನಡೆಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.

ಈ ಸಮಯದಲ್ಲಿ ಬಸವರಾಜ ಮ್ಯಾಗೋಟಿ, ವಿಠ್ಠಲ ಮಲ್ಲಾರಿ, ಅಶೋಕ ಸಾಳುಂಕೆ, ವಿನೋದ ಚೌಹಾನ್, ಪ್ರಕಾಶ ಯಲ್ಲಪ್ಪನವರ, ಅಡಿವೆಪ್ಪ ಬಳ್ಳೊಡಿ, ಶಿವಾನಂದ ಅಜ್ಜಪ್ಪನವರ, ಈಶ್ವರ ವಾಲಿಶೆಟ್ಟಿ, ಶಿವಗುಂಡ ಹಿತ್ತಲಮನಿ, ಗ್ರಾಮ ಪಂಚಾಯತಿಯ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು.

Read All News