ಎಸ್.ಎಂ. ಕೃಷ್ಣಾ ನಿಧನ: ಅವರ ಆಶೀರ್ವಾದ ಮತ್ತು ಮಾರ್ಗದರ್ಶನ ಮರೆಯಲಾಗದು - ವಿಜಯೇಂದ್ರ

  • krishna s
  • 10 Dec 2024 , 3:12 AM
  • Belagavi
  • 468

ಬೆಳಗಾವಿ: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣಾ ಅವರ ನಿಧನದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಮ್ಮ ದುಃಖ ವ್ಯಕ್ತಪಡಿಸಿದರು.

ಎಸ್.ಎಂ. ಕೃಷ್ಣಾ ನಿಧನ ತುಂಬಾ ನೋವಿನ ಸಂಗತಿ. ಅವರು ಅಜಾತ ಶತ್ರು ಮತ್ತು ಮಹಾನ್ ನಾಯಕರು. ವಿದೇಶಾಂಗ ಸಚಿವರಾಗಿಯೂ, ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾಗಿ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ನಾನು ರಾಜ್ಯಾಧ್ಯಕ್ಷನಾದ ನಂತರ ಅವರ ಆಶೀರ್ವಾದ ಮತ್ತು ಮಾರ್ಗದರ್ಶನ ಪಡೆದಿದ್ದೆ. ಅವರ ಮಾತುಗಳು ನನಗೆ ಪ್ರೇರಣೆ ನೀಡಿದ್ದು, ಅವರ ಬೆನ್ನು ತಟ್ಟುವ ಶೀಘ್ರ ಸಂದೇಶಗಳು ನನ್ನಲ್ಲಿ ಉತ್ಸಾಹವನ್ನೂ ಮೂಡಿಸಿವೆ,ಎಂದು ವಿಜಯೇಂದ್ರ ಹೇಳಿದರು.

ಅವರ ಆತ್ಮಕ್ಕೆ ಚಿರ ಶಾಂತಿ ದೊರೆಯಲಿ, ಹಾಗೂ ಅವರ ಕುಟುಂಬವು ದುಃಖವನ್ನು ಭರಿಸುವ ಶಕ್ತಿ ಪಡೆದುಕೊಳ್ಳಲಿ ಎಂದು ವಿಜಯೇಂದ್ರ ಪ್ರಾರ್ಥಿಸಿದರು.

ವಿಜಯೇಂದ್ರ ಅವರು ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ಈ ಹೇಳಿಕೆ ನೀಡಿದರು.

Read All News