ನಮ್ಮ ಬಗ್ಗೆ ವಿರೋಧಿಗಳು ಮಾತಾಡಿದಷ್ಟು ನಾವು ಅಲರ್ಟ್ ಆಗ್ತಿವಿ ಸತೀಶ್ ಜಾರಕಿಹೊಳಿ

  • 15 Jan 2024 , 12:46 AM
  • Belagavi
  • 198

ಕಡೋಲಿ :ಗ್ರಾಮದಲ್ಲಿ ಹಿಂದು ಸಮಾವೇಶದಲ್ಲಿ ಸತೀಶ್ ಬಗ್ಗೆ ಹಗುರವಾಗಿ ಮಾತನಾಡಿದ ವಿಚಾರವಾಗಿ ವಿರೋಧಿಗಳು ಮಾತಾಡ್ತಾರೆ ಅವರಿಗೆ ಮಾತಾಡುವ ಹಕ್ಕಿದೆ. ನಮ್ಮ ಬಗ್ಗೆ ವಿರೋಧಿಗಳು ಮಾತನಾಡಿದಷ್ಟು ನಾವು ಅಲರ್ಟ್ ಆಗ್ತಿವಿ ಎಂದು ಕೆ.ಪಿ.ಸಿ.ಸಿ ಅದ್ಯಕ್ಷ ಸತೀಶ ಜಾರಕಿಹೊಳಿ ತಿರುಗೇಟು ನೀಡಿದರು.

ಹೊನಗಾದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪುತ್ತಳಿ ಲೋಕಾರ್ಪಣೆಯ ಸಮಾರಂಭದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿ ತಿಳಿಸಿದರು‌.

ಬೆಳಗಾವಿಯಲ್ಲಿ ಚುನಾವಣಾ ಸಮಿತಿ ಸಭೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು ಇಂದು ಪ್ರಾಥಮಿಕ ಸಭೆ ಅಷ್ಟೇ ನಡೆಯುತ್ತದೆ. ಮುಂದಿನ ದಿನಗಳಲ್ಲಿ ಅದಕ್ಕೆ ರೂಪರೇಷೆಗಳ ಸಿದ್ದಪಡೆಸುತ್ತೇವೆ. ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆ ವಿಚಾರ ಅವಕಾಶ ನೀಡುವುದಿಲ್ಲ. ಚರ್ಚೆ ಮಾಡುವ ವೇಳೆ ಏನಾದರೂ ಒಂದು ಸಮಸ್ಯೆ ತರ್ತಾರೆ. ಆದರೂ ಅಧಿವೇಶನದಲ್ಲಿ ಸಾಕಷ್ಟು ವಿಚಾರ ಪ್ರಸ್ತಾಪ ಮಾಡುತ್ತೇವೆ ಎಂದರು.

ಸರ್ಕಾರದಿಂದ ಸುವರ್ಣಸೌಧದ ಸೆಂಟ್ರಲ್ ಹಾಲ್ ನಲ್ಲಿ ಸಾವರ್ಕರ್ ಫೋಟೊ ಹಾಕುವ ವಿಚಾರದ  ಬಗ್ಗೆ ಸಿಎಲ್ ಪಿ ನಾಯಕರು ನಿರ್ಧಾರ ಕೈಗೊಳ್ಳುತ್ತಾರೆ. ನಮ್ಮ ನಾಯಕ ನಿರ್ಧಾರಕ್ಕೆ ನಾವು ಬದ್ಧರಾಗುತ್ತೇವೆ ಎಂದು ತಿಳಿಸಿದರು‌.

Read All News