ಬಜರಂಗದಳ ಅವಮಾನ ಮಾಡುವ ಪಕ್ಷಕ್ಕೆ ಸವದಿ ಸೇರಿದ್ದಾರೆ ಅವರನ್ನು ಸೋಲಿಸಿ: ಶಾ.

  • Shivaraj Bandigi
  • 14 Jan 2024 , 11:53 PM
  • Belagavi
  • 167

ಅಥಣಿ:  ರಾಜ್ಯದ ಚುನಾವಣೆ ಬೇರೆ ಅಥಣಿ ಚುನಾವಣೆ ಬೇರೆ ಡಬಲ್ ಇಂಜಿನ್ ಸರ್ಕಾರದ ಸಲುವಾಗಿ ಬಿಜೆಪಿಗೆ ಮತ ಹಾಕಿ ಅಥಣಿಯಲ್ಲಿ ಪಕ್ಷಕ್ಕೆ ದ್ರೋಹ ಮಾಡಿದ ಸವದಿ ಸೋಲಿಸಲು ಮತ ಹಾಕಿ ಎಂದು ಕಾಂಗ್ರೆಸ್ ಅಭ್ಯರ್ಥಿ ಸವದಿ ವಿರುದ್ಧ ಕೇಂದ್ರ ಸಚಿವ ಅಮಿತ್ ಶಾ ನೇರವಾಗಿ ವಾಗ್ದಾಳಿ ನಡೆಸಿದರು.

ಅವರು ಅಥಣಿ ಪಟ್ಟಣದ ಭೋಜರಾಜ ಕ್ರೀಡಾಂಗಣದಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಠಳ್ಳಿ ಹಾಗೂ ಶ್ರೀಮಂತ ಪಾಟೀಲ್ ಪರವಾಗಿ ಪ್ರಚಾರ ಸಮಾರಂಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ಲಕ್ಷ್ಮಣ ಸವದಿಯನ್ನ ಕಳೆದ ಚುನಾವಣೆಯಲ್ಲಿ ಸೋಲಿಸಿದ್ದು ಮಹೇಶ್ ಕುಮಟಳ್ಳಿ ಆದ್ರೂ ಸಹ ಯಡಿಯೂರಪ್ಪ ಸರ್ಕಾರದಲ್ಲಿ ಮಂತ್ರಿ ಮಾಡಿದೇವು ಸೋತಾಗ ನಾನೇ ಸವದಿ ಜತೆಗೆ ಮಾತಾಡಿದೆ ಅವರೇ ಎಂಎಲ್‌ಸಿ ಮಾಡಿ ಅಂತಾ ಹೇಳಿದ್ರೂ ನಾವು ಎಂಎಲ್‌ಸಿ ಮಾಡಿದ್ವಿ, ಮಂತ್ರಿ ಮಾಡಿದ್ವಿ. ಎಂಎಲ್‌ಸಿ ಅವಧಿ ಇದ್ರೂ ಯಾಕೆ ಪಕ್ಷ ಬಿಟ್ರೀ ಅಂತಾ ನೀವು ಪ್ರಶ್ನೆ ಮಾಡಬೇಕು ನೀವು.
ಪಕ್ಷ ಬಿಟ್ಟು ಹೋಗಿ ಕಾಂಗ್ರೆಸ್ ಸೇರಿಕೊಂಡ್ರೀ ಭಜರಂಗಬಲಿ ಅವಮಾನ ಮಾಡುವ ಪಕ್ಷ ಸೇರಿಕೊಂಡ್ರಿ, ಕಾಂಗ್ರೆಸ್ ನವರು ಮುಸ್ಲಿಂರಿಗೆ ಮೀಸಲಾತಿ ಕೊಡ್ತೇವಿ ಅಂತಿದ್ದಾರೆ ಲಿಂಗಾಯತರ ಮೀಸಲಾತಿ ಕಿತ್ತುಕೊಂಡು ಮುಸ್ಲಿಂ ಸಮುದಾಯಕ್ಕೆ ಕೊಡ್ತೀರಾ.?
ಬಯ್ಯಾ ಲಕ್ಷ್ಮಣ ಪದೇ ಪದೇ ನನ್ನ ಬಳಿ ಮಹದಾಯಿ ಯೋಜನೆಗಾಗಿ ಬರ್ತಿದ್ರೀ ನೀರಾವರಿ ಯೋಜನೆ ಸಲುವಾಗಿ ನನ್ನ ಬಳಿ ಬಂದಾಗ ಕಾಂಗ್ರೆಸ್‌ಗೆ ಬೈಯ್ಯುತ್ತಿದ್ರಿ ಇವತ್ತೇನಾಗಿದೆ.

Read All News