ಸವಿತಾ vs ಲಷ್ಮಿ : ಯಾರಿಗೆ ಒಲಿಯುವುದು ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಕುರ್ಚಿ?

  • krishna shinde
  • 25 Jan 2024 , 8:44 PM
  • Belagavi
  • 437

ಬೆಳಗಾವಿ: ಬೆಳಗಾವಿಯ ಹಾಲಿ ಮೇಯರ್ ಹಾಗೂ ಉಪಮೇಯರ್ ಅವರ ಅಧಿಕಾರಾವಧಿ ಫೆ.5ಕ್ಕೆ ಕೊನೆಗೊಳ್ಳುತ್ತಿದ್ದು, ಆ ಹಿನ್ನೆಲೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ಪಾಳಯದಲ್ಲಿ ರಾಜಕೀಯ ಲೆಕ್ಕಾಚಾರ ಜೋರಾಗಿಯೇ ನಡೆಯುತ್ತಿದೆ.

22ನೇ ಅವಧಿಗೆ ಮೇಯರ್‌ ಸ್ಥಾನ ಎಸ್‌ಸಿ ಮಹಿಳೆಗೆ, ಉಪಮೇಯರ್‌ ಹುದ್ದೆ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. 

ಆಡಳಿತಾರೂಢ ಬಿಜೆಪಿ 58 ಸದಸ್ಯರ ಪೈಕಿ 35 ಸದಸ್ಯರ ಸ್ಪಷ್ಟ ಬಹುಮತ ಹೊಂದಿದೆ. ಹೀಗಾಗಿ ಮೇಯರ್ ಮತ್ತು ಉಪಮೇಯರ್ ಎರಡೂ ಸ್ಥಾನಗಳು ಬಿಜೆಪಿ ಪಾಲಾಗಲಿವೆ ಎಂಬುದು ಸ್ಪಷ್ಟವಾಗಿದೆ. ಆದರೆ, ಕಾಂಗ್ರೆಸ್ ಆಪರೇಷನ್ ಹಸ್ತಕ್ಕೆ ಮುಂದಾಗಿದ್ದರೆ ಅವರ ಕನಸು ನನಸಾಗುವುದು ಕಷ್ಟ. ಏಕೆಂದರೆ ಕಾಂಗ್ರೆಸ್‌ನಲ್ಲಿ ಮೇಯರ್‌ ಸ್ಥಾನಕ್ಕೆ ಮೀಸಲಾತಿ ಇರುವ ಎಸ್‌ಸಿ ಮಹಿಳಾ ಅಭ್ಯರ್ಥಿ ಇಲ್ಲ. 

ಇದಕ್ಕೆ ವ್ಯತಿರಿಕ್ತವಾಗಿ, ಆಡಳಿತಾರೂಢ ಬಿಜೆಪಿಗೆ ಈ ವರ್ಗದಿಂದ ಯಾವುದೇ ತೊಂದರೆ ಇಲ್ಲ. ಏಕೆಂದರೆ ಅವರಿಗೆ ಸವಿತಾ  ಕಾಂಬಳೆ ಮತ್ತು ಲಕ್ಷ್ಮಿರಾಥೋಡ್ ಎಂಬ ಇಬ್ಬರು ಎಸ್‌ಸಿ ಮಹಿಳಾ ಸದಸ್ಯರಿದ್ದಾರೆ. 

ಈ ಇಬ್ಬರಲ್ಲಿ ಒಬ್ಬರಿಗೆ ಮೇಯರ್ ಸ್ಥಾನ ಸಿಗುವುದು ನಿಶ್ಚಿತ. ಈ ಇಬ್ಬರು ಕಾರ್ಪೊರೇಟರ್‌ಗಳು ಬೆಳಗಾವಿ ಉತ್ತರ ಕ್ಷೇತ್ರದ ವಾರ್ಡ್‌ ಪ್ರತಿನಿಧಿಸುವುದರಿಂದ ಈ ವರ್ಷ ಬೆಳಗಾವಿಯ ಮೇಯರ್‌ ಸ್ಥಾನವನ್ನು ಬೆಳಗಾವಿ ಉತ್ತರ ಕ್ಷೇತ್ರಕ್ಕೆ ನೀಡುವುದು ಕುತೂಹಲ ಮೂಡಿಸಿದೆ. 

ಇದರಿಂದ ಹಾಲಿ ಮೇಯರ್ ಶೋಭಾ ಸೋಮನಾಚೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಾಗಾಗಿ ಬೆಳಗಾವಿ ದಕ್ಷಿಣ ಕ್ಷೇತ್ರಕ್ಕೆ ಕಳೆದ ಬಾರಿ ಮೇಯರ್ ಸ್ಥಾನ ಸಿಕ್ಕಿತ್ತು.

Read All News