ಬೆಳಗಾವಿ ನಗರದ ಖಾಸಗಿ ಹೋಟೆಲಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಸರ್ಕಾರದ ಕಾನೂನು ಮತ್ತು ಸಂಸದೀಯ ಸಚಿವರಾದ ಮಾದುಸ್ವಮಿ ಅವರು ಕನ್ನಡ ಭಾಷೆಯ ಸಮಗ್ರ ಅಭಿವೃದ್ದಿಯ ಬಿಲ್ ಈ ದೀನ ಮಂಡಿಸಲಾಗುತ್ತದೆ ಎಂದು ಹೇಳಿದ್ದಾರೆ.
ಗಡಿ ಹಾಗೂ ಭಾಷೆಯ ವಿವಾದದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಕನ್ನಡ ನಾಡು ಹಾಗೂ ಭಾಷೆಯ ರಕ್ಷಣೆಗೆ ನಮ್ಮ ಸರ್ಕಾರ ಯಾವತ್ತೂ ಇದ್ದೆ ಇರುತ್ತದೆ.
ಕನ್ನಡ ನೆಲದ ಒಂದಿಂಚು ಜಾಗವನ್ನು ಪರರಿಗೆ ಬಿಡುವ ಪ್ರಶ್ನೆಯೇ ಇಲ್ಲ, ಅದಕ್ಕಾಗಿ ಇವತ್ತು ಸದನದಲ್ಲಿ ಕನ್ನಡ ಭಾಷೆಯ ಸಮಗ್ರ ಅಭಿವೃದ್ದಿಯ ಮಸೂದೆಯನ್ನು ಮಂಡನೆ ಮಾಡುತ್ತೇವೆ ಎಂದರು.