ಅಥಣಿ: ತಾಲೂಕಿನ ಹಲ್ಯಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಬ್ಯಾಕ್ ವಿತರಿಸಲಾಯಿತು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಇಂಚರಕೇರಿ ಸಾಂಪ್ರದಾಯ ಹಾಗೂ ರೈತರ ರೈತ ಸಂಘ ಹಸಿರು ಸೇನೆಯ ರಾಜ್ಯ ಗೌರವಾಧ್ಯಕ್ಷರಾದ ಶಶಿಕಾಂತ ಪಡಸಲಗಿ ಗುರುಗಳು ಭಾಗವಹಿಸಿದರು.
ಇದೇ ವೇಳೆ ಮಾತನಾಡಿದ ಶಶಿಕಾಂತ ಪಡಸಲಗಿ ಗುರುಗಳು ವಿದ್ಯಾರ್ಥಿ ಜೀವನವು ಬಹಳ ಅಮೂಲ್ಯದಿಂದ ಕೂಡಿದ್ದು ಶಿಕ್ಷಕರು ಅದನ್ನು ಸರಿಯಾದ ರೀತಿಯಲ್ಲಿ ತಿದ್ದುವ ಮಹಾದಾನಿಗಳು ಅವರಿಗೆ ಗೌರವ ನೀಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು.
ಇದೇ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮುದುಕಣ್ಣ ಶೇಗುಣಸಿ ಬಿಜೆಪಿ ಯುವ ಮುಖಂಡರಾದ ಸಿದ್ದಪ್ಪ ಲೋಕುರ ಬಾಳಪ್ಪ ಬಾಗಿ ಅಜಿತ್ ಸಿಂಧೆ ರಾಯಪ್ಪ ಭಾಗಿ ಕಾಂಗ್ರೆಸ್ ಯುವ ಮುಖಂಡರಾದ ಚಿದಾನಂದ ಮುಕಣಿ ಹಾಗೂ ಶಾಲೆಯ ಮುಖ್ಯೋಪಾಧ್ಯರಾದ ಮಂಜುನಾಥ್ ಹತ್ತಿ ಮತ್ತು ಸಹ ಶಿಕ್ಷಕರು ಶಿಕ್ಷಕಿಯರು ಹಾಗೂ ಶಾಲಾ ಮುದ್ದು ಮಕ್ಕಳು ಸಮಸ್ತ ಹಲ್ಯಾಳ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.