ಅಥಣಿಯಲ್ಲಿ ಭೀಕರ ಅಪಘಾತ ಇಬ್ಬರು ಚಾಲಕರು ಸಾವು

  • 11 Jan 2024 , 4:20 PM
  • Belagavi
  • 236

ಅಥಣಿ:ಶಾಲೆ ಬಸ್ ಹಾಗೂ ಗೂಡ್ಸ್ ವಾಹನ ನಡುವೆ ಅಪಘಾತ ನಡೆದ ಘಟನೆ ಶನಿವಾರ ಮುಂಜಾನೆ ನಡೆದಿದೆ.

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಅಪಘಾತ ನಡೆದಿದ್ದು, ಬಣಜವಾಡ ಶಿಕ್ಷಣ ಸಂಸ್ಥೆಗೆ ಸೇರಿದ ಶಾಲೆ ವಾಹನ ಟ್ರಕ್ ನಡುವೆ ಅಪಘಾತ ಸಂಭವಿಸಿದೆ. ಮುಖಾಮುಖಿ ಡಿಕ್ಕಿಯ ತೀವ್ರತೆಗೆ ಇಬ್ಬರು ಚಾಲಕರು ಸ್ಥಳದಲ್ಲೇ ಸಾವುನ್ನು ಅಪ್ಪಿದ್ದಾರೆ‌, ಅಷ್ಟೆ ಅಲ್ಲ, ಹತಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಂಭೀರ ಗಾಯವಾಗಿದೆ.ಇದು ಅಥಣಿ ಪಟ್ಟಣದ ಹೊರವಲಯದ ಮೀರಜ್ ರಸ್ತೆ ಅಪಘಾತವಾಗಿದೆ‌.

ಗಾಯಾಳು ವಿದ್ಯಾರ್ಥಿಗಳನ್ನು ಸ್ಥಳಿಯ ಪಟ್ಟಣದ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕಾಲೇಜನಿಂದ ಒಂದು ಮೀಟರ್ ಅಂತರದಲ್ಲಿ ಶಾಲೆ ಬಸ್ ಹಾಗೂ ಗೂಡ್ಸ್ ವಾಹನ ನಡುವೆ ಅಪಘಾತವಾಗಿದೆ‌. ಸ್ಥಳದಲ್ಲಿ ಜನಜಂಗುಳಿ, ಮಕ್ಕಳ ಪೋಷಕರಲ್ಲಿ ಆತಂಕದ ಛಾಯೆ ನಿರ್ಮಾಣವಾಗಿದೆ. ಸ್ಥಳಕ್ಕೆ ಅಥಣಿ ಪೊಲೀಸರು ಬೇಟಿ ಪರಿಶೀಲನೆ‌ ನಡೆಸಿದ್ದಾರೆ.

Read All News