ಕಾಂಗ್ರೆಸ್ ಹಿರಿಯ ನಾಯಕ ದೇಶಪಾಂಡೆ ಮುಂದಿನ ಮುಖ್ಯಮಂತ್ರಿ ಆದರೆ ಅಚ್ಷರಿ ಇಲ್ಲ

  • shivaraj B
  • 1 Sep 2024 , 5:45 PM
  • Belagavi
  • 517

ಬೆಳಗಾವಿ :  ಮೊದಲಿನ ಕಾಲದಿಂದಲೂ ಹಿರಿಯ ಮುತ್ಸದ್ದಿ ರಾಜಕಾರಣಿಗಳನ್ನು ಬೆಳಕಿಗೆ ತರದೆ ತಾವೇ ಅಧಿಕಾರದ ರುಚಿ ಅನುಭವಿಸುತ್ತಿರುವ ಕಾಂಗ್ರೆಸ್ ಪಕ್ಷ ಬಿಟ್ಟಿ ಭಾಗ್ಯಗಳ ಆಧಾರದ ಮೇಲೆ ಅಧಿಕಾರಕ್ಕೆ ಬಂದಿದ್ದು ಮಾತ್ರ ನಿಜ.

ಮುಡಾ ಹಗರಣದಲ್ಲಿ ಸಿಲುಕಿ ಕುರ್ಚಿ ಗಟ್ಟಿ ಮಾಡಿಕೊಳ್ಳಲು ಹೊರಟಿರುವ ಸಿಎಂ ಸಿದ್ದರಾಮಯ್ಯನವರ ನಂತರ ಆ ಗದ್ದುಗೆಗೆ ಯಾರೂ ಸೂಕ್ತ ಅಂತ ಹುಡುಕಾಟ ನಡೆಸಿದ ಹೈಕಮಾಂಡಗೆ ಸಿಕ್ಕಿದ ಉತ್ತರ ಕನ್ನಡದ ಹಳಿಯಾಳ ಶಾಸಕ ಹಿರಿಯ ಕಾಂಗ್ರೆಸ್ ಮುಖಂಡ ಅರ್.ವಿ.ದೇಶಪಾಂಡೆ. 

ಹಲವು ಇಲಾಖೆಗಳ ಮಂತ್ರಿಯಾಗಿ ಕರ್ತವ್ಯ ನಿರ್ವಹಿಸಿದ ದೇಶಪಾಂಡೆ ಅವರನ್ನು ಹೈಕಮಾಂಡ ಸಿಎಂ ಪದವಿಗೆ ಪರಿಗಣಿಸಿದರೂ ಅಚ್ಚರಿ ಇಲ್ಲ.

ವರದಿ : ರವಿಕಿರಣ್  ಯಾತಗೇರಿ 

Read All News