ಚಿಕ್ಕೋಡಿ- ಸಾವನ್ನು ಲೆಕ್ಕಿಸದೇ ಬಸ್ ಬಾಗಿಲಿಗೇ ನೇತಾಡುತ್ತಾ ವಿದ್ಯಾರ್ಥಿಗಳು ಪ್ರಯಾಣ ಮಾಡುವ ದೃಶ್ಯ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೆಳಕೂಡ ಗ್ರಾಮ ಕಾಣಸಿಬಹುದು. ಸರ್ಕಾರದ ಶಕ್ತಿ ಯೋಜನೆ, ಸಮರ್ಪಕ ಬಸ್ ವ್ಯವಸ್ಥೆಯ ಕೊರತೆಯಿಂದ ಶಾಲಾ,ಕಾಲೇಜು ವಿದ್ಯಾರ್ಥಿಗಳ ಪರದಾಟ ಹೇಳತೀರದು.
ಕರಗಾಂವ, ಡೋಣವಾಡ, ಬೆಳಕೂಡ, ಉಮರಾಣಿ ಸೇರಿದಂತೆ ಏಳೆಂಟು ಗ್ರಾಮಗಳಿಗೆ ಒಂದೇ ಬಸ್ ಇರುವದರಿಂದ ವಿದ್ಯಾರ್ಥಿಗಳು ಬಸ್ ಬಾಗಿಲಿಗೆ ನೇತು ಬಿದ್ದು ಪ್ರಯಾಣ ಮಾಡುತ್ತಿದ್ದಾರೆ.
ವಿದ್ಯಾರ್ಥಿಗಳು ಸ್ವಲ್ಪ ಯಾವಾರಿದ್ರೂ ಅವರ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ವಿದ್ಯಾರ್ಜನೆ ಬಿಟ್ಟು ಬಸಗಾಗಿ ಕಾಯುವ ದನನೀಯ ಸ್ಥಿತಿ ಎದುರುಸುತ್ತಿರುವ ವಿದ್ಯಾರ್ಥಿಗಳು ಸಾರಿಗೆ ಅಧಿಕಾರಿಗಳ ವಿರುದ್ಧ ಕಣ್ಣು ಕೆಂಪಗಾಗಿಸಿಕೊಂಡಿದ್ದಾರೆ.
ಸರ್ಕಾರ, ಮೇಲಾಧಿಕಾರಿಗಳು ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಕಲ್ಪಿಸಲು ಆಗ್ರಹಿಸುತ್ತಿದ್ದಾರೆ.