ಬೈಲಹೊಂಗಲ: ಪಟ್ಟಣದ ವಿಶ್ವಹಿಂದೂ ಪರಿಷದ್, ಬಜರಂಗದಳ ತಾಲ್ಲೂಕು ಘಟಕ ವತಿಯಿಂದ ಅ.7 ರಂದು ಶೌರ್ಯ ಜಾಗರಣ ರಥಯಾತ್ರೆ ಕಾರ್ಯಕ್ರಮವು ಜರುಗಲಿದೆ.
ಬೆಳಿಗ್ಗೆ 10ಕ್ಕೆ ಕರೀಕಟ್ಟಿ ಗ್ರಾಮದಿಂದ ಆರಂಭಗೊಳ್ಳುವ ಯಾತ್ರೆ ದೊಡವಾಡ, ಮಲ್ಲಮ್ಮನ ಬೆಳವಡಿ, ಪಟ್ಟಿಹಾಳ, ಖೋದಾನಪೂರ, ಸಂಗೊಳ್ಳಿ, ಗರ್ಜೂರ, ಕೆಂಗಾನೂರ, ನಯಾನಗರ, ಆನಿಗೋಳ ಗ್ರಾಮ ಮಾರ್ಗವಾಗಿ ಸಂಜೆ 6 ಕ್ಕೆ ಬೈಲಹೊಂಗಲ ಪಟ್ಟಣದ ಅಂಬೇಡ್ಕರ ಉದ್ಯಾನವನದಿಂದ ಪ್ರಮುಖ ಬಜಾರ ರಸ್ತೆ ಮಾರ್ಗವಾಗಿ ವೀರರಾಣಿ ಕಿತ್ತೂರು ಚನ್ನಮ್ಮನ ಸಮಾಧಿ ಸ್ಥಳಕ್ಕೆ ಬಂದು ತಲುಪಲಿದೆ.
ಈ ಕಾರ್ಯಕ್ರಮದಲ್ಲಿ ಜಾತಿ -ಭೇದ ಮರೆತು ನಾವೆಲ್ಲಾ ಒಂದು, ನಾವೆಲ್ಲಾ ಹಿಂದೂ ಎಂದು ಬಂದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶೌರ್ಯ ಜಾಗರಣ ರಥಯಾತ್ರೆ ಯಶಸ್ವಿಗೊಳಿಸಬೇಕು ಎಂದು ವಿಶ್ವಹಿಂದೂ ಪರಿಷದ್ ತಾಲ್ಲೂಕು ಘಟಕ ಅಧ್ಯಕ್ಷ ಕಾಶಿನಾಥ ಬಿರಾದಾರ ತಿಳಿಸಿದ್ದಾರೆ.