ಶೆಟ್ಟರ್ ಅವರೇ ಮೊದಲು ಬೆಳಗಾವಿಯಲ್ಲಿ ಮನೆ ಮಾಡಿ: ಟೋಪಣ್ಣವರ

  • shivaraj B
  • 20 Oct 2024 , 11:20 AM
  • Belagavi
  • 515

ಬೆಳಗಾವಿ : ಬೆಳಗಾವಿ ವಿಮಾನ ನಿಲ್ದಾಣದಿಂದ ಬೆಂಗಳೂರುಗೆ ಸೇವೆ ನೀಡುತ್ತಿದ್ದ ಇಂಡಿಗೋ ವಿಮಾನ ಅ.27 ರಿಂದ ರದ್ದಾಗುತ್ತಿವೆ. ಆದರೆ ಸಂಸದ ಜಗದೀಶ್ ಶೆಟ್ಟರ್ ಸ್ಥಳೀಯ ಜನರ ಸಮಸ್ಯೆಯನ್ನು ಆಲಿಸುತ್ತಿಲ್ಲ ಎಂದು ರಾಜಕುಮಾರ ಟೋಪಣ್ಣವರ ಆರೋಪಿಸಿದ್ದಾರೆ.

ಬೆಂಗಳೂರಿನಿಂದ ಬೆಳಗಾವಿಗೆ ಒಂದೇ ಭಾರತ್ ರೈಲಿಗೆ ತಾಂತ್ರಿಕ ಸಮಸ್ಯೆ ಇದೆ ಎಂದು ಅನುಮತಿ ಕೊಡಲಿಲ್ಲ. ಆದರೆ ಪುಣೆಯಿಂದ ಹುಬ್ಬಳ್ಳಿ ಒಂದೇ ಭಾರತ್ ರೈಲು ಪ್ರಾರಂಭ ಮಾಡಿದ್ದಾರೆ. ಈಗ ಯಾಕೆ ತಾಂತ್ರಿಕ ಸಮಸ್ಯೆ ಬರಲಿಲ್ಲವೇ ಎಂದು ಪ್ರಶ್ನಿಸಿರುವ ಅವರು, ಬೆಳಗಾವಿಗೆ ಒಂದೇ ಭಾರತ್ ರೈಲು ಬೇಕಾದಾಗ ತಾಂತ್ರಿಕ ಸಮಸ್ಯೆ ಎನ್ನುವ ರೈಲ್ವೆ ಇಲಾಖೆ ಪುಣೆ - ಹುಬ್ಬಳ್ಳಿಯಿಂದ ಒಂದೇ ಭಾರತ್ ರೈಲು ಆರಂಭಿಸಿದ್ದು, ಬೆಳಗಾವಿ ಜನರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿ ಹೆಚ್ಚಿಗೆ ಬರುವುದು ಬೆಳಗಾವಿಯಲ್ಲಿ. ರಾಷ್ಟ್ರೀಯ ಹೆದ್ದಾರಿ ಬೆಳಗಾವಿಯಲ್ಲಿದೆ. ಕಿತ್ತೂರಿನ ಗಡಿಯಿಂದ ನಿಪ್ಪಾಣಿವರೆಗೆ ರಾಷ್ಟ್ರೀಯ ಹೆದ್ದಾರಿ ಇದೆ. ಜಾಂಬೋಟಿ, ಬೆಳಗಾವಿ, ಕೊಲ್ಲಾಪುರ, ರಾಮನಗರ, ಅನಮೋಡ ವರೆಗೆ ರಾಷ್ಟ್ರೀಯ ಹೆದ್ದಾರಿ ಬರುತ್ತದೆ. ಯಾವುದೇ ಸಮಸ್ಯೆ ಇದ್ದರೇ, ಅದು ಧಾರವಾಡದಲ್ಲಿದೆ. ಅದನ್ನು ಬೆಳಗಾವಿಗೆ ಸ್ಥಳಾಂತರ ಮಾಡಬೇಕು ಹಾಗೂ ಬೆಳಗಾವಿ ನಗರದ ರಿಂಗ್ ರಸ್ತೆಯ ಬಗ್ಗೆಯೂ ದ್ವನಿ ಎತ್ತಬೇಕಿದೆ ಎಂದು ಒತ್ತಾತಿಸಿದ್ದಾರೆ. 

ಜಗದೀಶ್ ಶೆಟ್ಟರ್ ನನ್ನ ಕರ್ಮಭೂಮಿ ಬೆಳಗಾವಿ ಎಂದು ಹೇಳಿದ್ದರು. ಆದರೆ ಅವರು ಇಲ್ಲಿಯವರೆಗೂ ಸ್ವಂತ ಮನೆ ಮಾಡಿಲ್ಲ. ಕರ್ಮ ಭೂಮಿ‌ ಬಿಟ್ಟು ಜನ್ಮ ಭೂಮಿ ಬಗ್ಗೆ ಕಾಳಜಿ ವಜಿಸಿದ ಹಾಗೆ ಕಾಣುತ್ತಿದೆ. ದಯಮಾಡಿ ಇಲ್ಲಿ ಮನೆ ಮಾಡಿ ಇಲ್ಲಿನ ಜನರ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.

Read All News