ಐದೂ ಗ್ಯಾರಂಟಿಗಳು ಈ ಆರ್ಥಿಕ ವರ್ಷದಲ್ಲಿ ಜಾರಿ ಸಿದ್ದರಾಮಯ್ಯ

  • Krishna Shinde
  • 14 Jan 2024 , 6:26 PM
  • Bengaluru
  • 134

ಬೆಂಗಳೂರು :ಸಚಿವ ಸಂಪುಟ ಸಭೆಗೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಗ್ಯಾರೆಂಟಿ ಯೋಜನೆಗಳ ಜಾರಿ ಕುರಿತಾಗಿ ಚರ್ಚಿಸಿದ್ದರು.

ಐದು ಗ್ಯಾರಂಟಿಗಳನ್ನು  ಈ ಆರ್ಥಿಕ ವರ್ಷದಲ್ಲಿ ಜಾರಿ ಮಾಡಲು ತೀರ್ಮಾನ ಮಾಡಿದ್ದೇವೆ ಮತ್ತು ಜಾತಿ, ಧರ್ಮ, ಭಾಷೆ ಯಾವುದೆ ಭೇದ ಭಾವವಿಲ್ಲದೆ  ಎಲ್ಲರಿಗೂ ಗ್ಯಾರಂಟಿ ಕೊಡ್ತೀವಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಜೂನ್ 11 ರಿಂದಲೇ ಉಚಿತ ಬಸ್ ಪ್ರಯಾಣ ಜಾರಿಯಾಗಲಿದೆ,ಜುಲೈ 1 ರಿಂದ  200 ಯೂನಿಟ್ ವರೆಗೆ ವಿದ್ಯುತ್ ಉಪಯೋಗಿಸಿದವರು ಯಾರೂ ಕರೆಂಟ್ ಬಿಲ್ ಕಟ್ಟಬೇಕಿಲ್ಲ.

ಆಗಸ್ಟ್‌ 15 ರಿಂದ ಗೃಹಲಕ್ಷ್ಮಿ ಯೋಜನೆ ಜಾರಿ,ಯೋಜನೆಗೆ ನೋಂದಾಯಿಸಲು 1 ತಿಂಗಳ ಕಾಲಾವಕಾಶವಿದೆ,ಆಧಾರ್‌, ಬ್ಯಾಂಕ್‌ ಪಾಸ್‌ಬುಕ್‌ ದಾಖಲೆಗಳನ್ನು ಆನ್‌ಲೈನ್‌ ಮೂಲಕ ಸಲ್ಲಿಸಬಹುದು ಎಂದು ತಿಳಿದುಬಂದಿದೆ.

ಮನೆಯ ಯಜಮಾನಿಗೆ ಮಾಸಿಕ ₹2000 ಹಾಗು ಯೋಜನೆಯ ಲಾಭ ಪಡೆಯಲು ಬ್ಯಾಂಕ್‌ ಖಾತೆಗೆ ಆಧಾರ್‌ ಜೋಡಣೆ ಕಡ್ಡಾಯವಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Read All News