ಮಾತು ತಪ್ಪಿದ ಸಿದ್ದರಾಮಯ್ಯ ‌: ಮಾಜಿ ಶಾಸಕ ರಮೇಶ ಕುಡಚಿ ಆಪಾದನೆ

  • shivaraj bandigi
  • 22 Mar 2024 , 4:26 PM
  • Belagavi
  • 635

ಬೆಳಗಾವಿ : ಬೆಳಗಾವಿ, ಚಿಕ್ಕೋಡಿ ಲೋಕಸಭೆ ಅಭ್ಯರ್ಥಿ ಆಯ್ಕೆಗೆ ಮಾಜಿ ಶಾಸಕ ರಮೇಶ ಕುಡಚಿ ಅಸಮಾಧಾನ ಹೊರಹಾಕಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಳಗಾವಿಯ ಬಹಿರಂಗ ಸಮಾವೇಶದಲ್ಲಿ ಕುರುಬ ಸಮಾಜಕ್ಕೆ ಎರಡರಲ್ಲಿ ಒಂದು ಟಿಕೇಟ ಕೊಡತೇವಿ ಅಂತಾ ಘೋಷಣೆ ಮಾಡಿ ಈಗ ಬೇರೆದವರಿಗೆ ಟಿಕೇಟ ನೀಡಿದ್ದು ಯಾವ ನ್ಯಾಯ ಎಂದರು. 

View this post on Instagram

A post shared by localview 🇮🇳 (@localview.in)

ನಮ್ಮ ಸಮಾಜದ ಲಕ್ಷ್ಮಣರಾವ್ ಚಿಂಗಳೆ ಅವರನ್ನು ಬುಡಾ ಅಧ್ಯಕ್ಷ ಮಾಡಿ ಸೈಡಲೈನ್ ಮಾಡುವ ಕೆಲಸ ಮಾಡಿದಿರಿ ಎಂದು ಆರೋಪಿಸಿದರಲ್ಲದೆ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಕೂಡಾ ಟಿಕೇಟಗಾಗಿ ಅರ್ಜಿ ಸ್ವೀಕರಿಸುತ್ತಿದ್ದು, ಸರ್ವೇ ಕಾರ್ಯ ನಡೆದಿದೆ ಅಂತಾ ಹೇಳಿದ್ದರು. ನೀವು ಮೃಣಾಲ ಹೆಬ್ಬಾಳಕರ, ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಟಿಕೇಟ್ ನೀಡುವದಾದರೆ ಸಮಾವೇಶದಲ್ಲಿ ಘೋಷಣೆ ಮಾಡುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದರು. 

ಇದೆಲ್ಲ ಕಳೆದ 8-10 ದಿನಗಳಿಂದ ನಡೆಯುತ್ತಾ ಬಂದಿದ್ದು ಟಿವಿಯಲ್ಲಿ ಜನಾ ದಿನಾ ನೋಡತಾ ಇದ್ದಾರೆ ಮೃಣಾಲ ಮತ್ತು ಪ್ರಿಯಾಂಕಾ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯ ಮಾಡುತ್ತಿದ್ದಾರೆ ಹೀಗಿರುವಾಗ ಅರ್ಜಿ ಕರೆಯುವದಾದರೂ ಯಾಕೆ? ಅಭ್ಯರ್ಥಿಗಳನ್ನು ಮೊದಲೇ ಆಯ್ಕೆ ಮಾಡಿದರೆ ನಮ್ನಂತಹ ಕಾರ್ಯಕರ್ತರು ಏನು ಮಾಡಬೇಕು ಎಂದರು.

Read All News