ಚಿಕ್ಕೋಡಿ : ಆರೋಪ ಸ್ಥಾನದಲ್ಲಿ ಯಾರೇ ಇದ್ದರೂ ಸಹ ರಾಜೀನಾಮೆ ನೀಡಲೇಬೇಕು. ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಲಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ ಹೇಳಿದರು.
ಚಿಕ್ಕೋಡಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಸಿದ್ದರಾಮಯ್ಯರ ರಾಜೀನಾಮೆಗೆ ಆಗ್ರಹಿಸಿದ ಅವರು, ಜನಪ್ರತಿನಿಧಿಗಳ ನ್ಯಾಯಾಲಯದಿಂದ ತೀರ್ಪು ಬಂದಿದೆ. ಕ್ಯಾಬಿನೆಟ್ ವತಿಯಿಂದ ಸಿಬಿಐಗೆ ನೇರ ತನಿಖೆಗೆ ಅನುಮತಿ ಕೊಡಲ್ಲ ಅಂತ ಹೇಳುತ್ತಾರೆ.
ಅಧಿಕಾರಿದಲ್ಲಿದ್ದುಕೊಂಡು ತನಿಖೆ ಎದುರಿಸುವುದು ಕಾನೂನುಬಾಹಿರ. ಆರೋಪ ಮುಕ್ತರಾದ ಬಳಿಕ ನೀವು ಮತ್ತೆ ಸಿಎಂ ಸ್ಥಾನ ಅಲಂಕರಿಸಬಹುದು.
ಅದರಲ್ಲಿ ನಮ್ಮದೇನು ತಕರಾರು ಇಲ್ಲವೆಂದರು.