ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿ: ಟೋಪಣ್ಣವರ ಕಿಡಿ

  • 15 Jan 2024 , 12:43 AM
  • Belagavi
  • 112

ಬೆಳಗಾವಿ: ಸದಾಶಿವ ನಗರದ ಮುಖ್ಯ ರಸ್ತೆಯನ್ನು ಸ್ಮಾರ್ಟ್ ಸಿಟಿಯಿಂದ ಕಾಮಗಾರಿ ಮಾಡುತ್ತಿರುವುದು ಕಳಪೆಯಾಗಿದೆ. ಕೂಡಲೇ ಆ ಕಾಮಗಾರಿ ತಡೆ ಹಿಡಿಯುವಂತೆ ಆಮ್ ಆದ್ಮಿ ಉತ್ತರ ವಲಯ ಉಸ್ತುವಾರಿ ರಾಜಕುಮಾರ ಟೋಪಣ್ಣವರ ‌ಆರೋಪಿಸಿದರು.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,

ಬೆಳಗಾವಿ ನಗರದಲ್ಲಿ ಸ್ಥಳೀಯ ಜನಪ್ರತಿನಿಧಿಗಳ ವಿತಂಡವಾದಕ್ಕೆ ಜನರು ಪರಿತಪಿಸುವಂತಾಗಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಸ್ಮಾರ್ಟ್ ಸಿಟಿ ಕಾಮಗಾರಿಯನ್ನು ತರಾತುರಿಯಲ್ಲಿ ಮುಗಿಸಿ ಇಲ್ಲಿನ ಅನುದಾನ ಖಾಲಿ ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ಹರಿಹಾಯ್ದರು.

ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಯಿಂದ ಕೈಗೊಳ್ಳಬೇಕಾದ ಅಭಿವೃದ್ಧಿ ಕಾಮಗಾರಿಗಳು ಯಾಚವೂ ಸರಿಯಾಗಿಲ್ಲ. ಎಲ್ಲ‌ ಕಡೆಗಳಲ್ಲಿ ಕಾಂಕ್ರೀಟ್ ರಸ್ತೆ ಮಾಡುತ್ತಿರುವ ಸ್ಮಾರ್ಟ್ ಸಿಟಿ ಅಧಿಕಾರಿಗಳು ಸದಾಶಿವ ನಗರದ ಪ್ರಮುಖ ರಸ್ತೆಗೆ ಡಾಂಬರೀಕರಣ ಮಾಡುತ್ತಿರುವುದು ದುರ್ದೈವದ ಸಂಗತಿ ಎಂದರು.

ಈ‌ ಸಂದರ್ಭದಲ್ಲಿ ಶಂಕರ ಹೆಗಡೆ, ಜುನೈದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Read All News