ಬಿಮ್ಸ್ ಆಸ್ಪತ್ರೆಗೆ ಹಣ್ಣುಗಳನ್ನ ವಿತರಣೆ ಮಾಡಿದ ಸಮಾಜ ಸೇವಕರು.

  • 14 Jan 2024 , 11:54 PM
  • Belagavi
  • 166

ಬೆಳಗಾವಿ: ಬೆಳಗಾವಿ ನಗರದಲ್ಲಿ ತಮ್ಮದೆ ಹೆಸರು ಮಾಡಿಕೊಂಡಿರುವ ಸಮಾಜ ಸೇವಕರು ಇವತ್ತು ನಗರದಲ್ಲಿ ಬೀಮ್ಸ್ ಆಸ್ಪತ್ರೆಗೆ 800 ಬಾಳೆ ಹಣ್ಣುಗಳನ್ನ ನೀಡಿದ್ದು ವಿಶೇಷ.

ಹೌದು ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿನ ಅಡುಗೆ ಕೋಣೆಗೆ 800 ಬಾಳೆ ಹಣ್ಣುಗಳನ್ನ ಪೃಥ್ವಿ ಸಿಂಗ್ ಫೌಂಡೇಶನ್ ,ಫೇಸ್ ಬುಕ್ ಫ್ರೆಂಡ್ಸ್ ಸರ್ಕಲ್ ಮತ್ತು ಶ್ರೀರಾಮ್ ಸೈನಾ ಹಿಂದೂಸ್ತಾನ್ ತಂಡದಿಂದ ಇವತ್ತು ನೀಡಲಾಗಿದೆ. ಆದ್ದರಿಂದ ಬೆಳಗಿನ ಉಪಾಹಾರ, ಮಧ್ಯಾಹ್ನ ಊಟ ಮತ್ತು ರಾತ್ರಿಯ ಊಟದ ಸಮಯದಲ್ಲಿ ಎಲ್ಲಾ ರೋಗಿಗಳಿಗೆ ವಿತರಿಸಲು ಕೂಡಾ ಸೂಚನೆ ನೀಡಿದ ಸಮಾಜ ಸೇವಕರು.

ಇದೇ ಸಂದರ್ಭದಲ್ಲಿ ರೋಗಿಗಳಿಗೆ ಸೇವೆ ಸಲ್ಲಿಸಲು ನಮಗೆ ಅವಕಾಶ ನೀಡಿದ ಬಿಮ್ಸ್ ಆಸ್ಪತ್ರೆ ಅಧಿಜಾರಿಗಳಿಗೆ ಧನ್ಯವಾದಗಳನ್ನ ಸಲ್ಲಿಸಿದರು.

ಪೃಥ್ವಿ ಸಿಂಗ್ ಪೌಂಡೇಶನ ಸಂಸ್ಥಾಪಕ ಪೃಥ್ವಿ ಸಿಂಗ್, ಪೇಸ್ಬುಕ್ ಪ್ರೇಂಡ್ ಸರ್ಕಲನ ಸಂತೋಷ್ ದಾರೆಕರ್, ಅವಧೂತ್ ತುದವೇಕರ್,ಬಲದೇವ್ ಕಣ್ವ & ಆಕಾಶ್ ದೇಸಾಯಿ. ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು..

Read All News