ಅಥಣಿ: ಸುಮಾರು 11 ದಿನಗಳಿಂದ ಗ್ರಾಮದ ವಿವಿಧೆಡೆ ಸಂಚರಿಸಿ ಕೊನೆಯ ದಿನವಾದ ನಿನ್ನೆ ಗ್ರಾಮದ ಹೃದಯ ಭಾಗದಲ್ಲಿ ಆಗಮಿಸಿದ ಜೋಕುಮಾರನಿಗೆ ಗ್ರಾಮದ ಮುತ್ತೈದರಲ್ಲ ಒಟ್ಟು ಸೇರಿ ನಮಿಸಿದ್ದಾರೆ. ಕುಮಾರನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಜೋಕುಮಾರ ಗ್ರಾಮದ, ಆ ಊರಿನ ರಕ್ಷಕ ಎಂಬ ಪ್ರತೀತಿ ಇದೆ. ಗ್ರಾಮಕ್ಕೆ ಯಾವುದೇ ಕೆಡುಕು ಆಗಬಾರದು, ಊರವರಿಗೆ ಯಾವುದೇ ಕಾಯಿಲೆ ಬರಬಾರದು, ಮಕ್ಕಳು- ಹಿರಿಯರು ಯಾವುದೇ ರೋಗಕ್ಕೆ ತುತ್ತಾಗಬಾರದು ಎಂಬ ನೆಲೆಯಲ್ಲಿ ಜೋಕುಮಾರನ ಪೂಜಿಸಲಾಗುತ್ತದೆ. ವಿಶೇಷವಾಗಿ ಮುತ್ತೈದೆಯರು ಜೋಕುಮಾರನ ಆರಾಧಿಸುತ್ತಾರೆ. ಮತ್ತು ಬೇಡಿಕೊಳ್ಳುತ್ತಾರೆ.
ಈ ಸಂದರ್ಭದಲ್ಲಿ ಹಳೆಯ ಸಂಪ್ರದಾಯದಂತೆ ಜೋಕುಮಾರ ಸುತ್ತಲೂ ಕುಳಿತು ಜೋಕುಮಾರ ಹಾಡುಗಳನ್ನು ಹಾಡಿ ಸಂಭ್ರಮಿಸುತ್ತಾರೆ.
ಇದೇ ವೇಳೆಯಲ್ಲಿ ಸಮಸ್ತ ತಳವಾರ್ ಸಮುದಾಯದ ಬಂಧು ಮಿತ್ರರು ಈ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು