ಶ್ರೀ ಗುರು ಶಾಂತೇಶ್ವರ ದಿನದರ್ಶಿಕೆಯನ್ನು ಬಿಡುಗಡೆಗೊಳಿಸಿದ ಬೆಂಗಳೂರು ಶ್ರೀಗಳು

  • shivaraj bandigi
  • 15 Jan 2024 , 10:01 AM
  • Belagavi
  • 587

ಬೆಳಗಾವಿ : 

ನಗರದ ಲಕ್ಷ್ಮೀ ಟೆಕಡಿಯಲ್ಲಿರುವ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಬೆಂಗಳೂರು ವಿಭೂತಿಪುರ ಸಂಸ್ಥಾನ ಮಠದ ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ಬೆಳಗಾವಿ ಹುಕ್ಕೇರಿ ಹಿರೇಮಠದಿಂದ ಹೊರ ತರಲಾದ 2024ನೇ ಸಾಲಿನ ದಿನದರ್ಶಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡುತ್ತ, ಹುಕ್ಕೇರಿ ಶ್ರೀ ಗುರುಶಾಂತೇಶ್ವರ ಹಿರೇಮಠದ ವತಿಯಿಂದ ಹೊರ ತರಲಾದ 2024ರ ಕ್ಯಾಲೆಂಡರ್ ನ್ನು ನಾವು ಬಿಡುಗಡೆಗೊಳಿಸಿದ್ದೇವೆ. ಹುಕ್ಕೇರಿ ಹಿರೇಮಠ ಧಾರ್ಮಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಕಾರ್ಯವನ್ನು ನಿರ್ವಹಿಸುತ್ತಿದರ. ಹುಕ್ಕೇರಿ ಶ್ರೀಗಳು ಸುಮಾರು 10 ಸಾವಿರ ಕ್ಯಾಲೆಂಡರ್ ಗಳನ್ನು ಎಲ್ಲ ಶಾಲೆಗಳಿಗೆ ಮತ್ತು ಬೇರೆ ಬೇರೆ ಸಂಸ್ಥೆಗಳಿಗೆ ಉಚಿತವಾಗಿ ನೀಡುವುದರ ಮೂಲಕ ಆದರ್ಶವನ್ನು ಮೆರೆದಿದ್ದಾರೆ ಎಂದರು.

ಅಥಣಿ ಮೋಟಗಿಮಠದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ ಮಾತನಾಡಿ, ಹುಕ್ಕೇರಿ ಹಿರೇಮಠ ಎಂದರೆ ಎಲ್ಲರನ್ನು ಗೌರವಿಸುವ ಮಠ. ಇವತ್ತು ಕನ್ನಡಕ್ಕಾಗಿ ಗಡಿಭಾಗದಲ್ಲಿ ಅದ್ಬುತವಾದ ಕಾರ್ಯವನ್ನು ಮಾಡುತ್ತಿದೆ‌. ಶ್ರೀಗಳ ಕಾರ್ಯವನ್ನು ಹಳ್ಳಿಯಿಂದ ದಿಲ್ಲಿವರೆಗೆ ಎಲ್ಲರು ಮೆಚ್ಚುತ್ತಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು. ಸುನೀತಾ ನಿಂಬರಗಿ ನಾಗಲೋತಿಮಠ, ನಿಶಾಂತ ಸ್ವಾಮಿ, ಮಹಾಂತೇಶ ಶಾಸ್ತ್ರೀ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Read All News