ವಿಶೇಷ ಅಲಂಕಾರದಿಂದ ಪೂಜಿಸಲ್ಪಟ್ಟ ಶ್ರೀ ರಾಮಲಿಂಗೇಶ್ವರ.

  • shivaraj B
  • 12 Aug 2024 , 1:41 PM
  • Athani
  • 365

ಅಥಣಿ : ಪವಿತ್ರ ಶ್ರಾವಣ ಮಾಸದ ಶುಭ ಸೋಮವಾರದಂದು ಇಂದು ಅಥಣಿ ಪಟ್ಟಣದ ಜತ್ತ ರಸ್ತೆಗೆ ಹೊಂದಿಕೊಂಡಂತೆ ಇರುವ ಬಡಕಂಬಿ ತೋಟದ ಶ್ರೀರಾಮಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನ ಏರ್ಪಡಿಸಲಾಗಿತ್ತು.

ಹೂಗಳಿಂದ ಅಲಂಕೃತಗೊಂಡಂತಹ ಶ್ರೀ ರಾಮಲಿಂಗೇಶ್ವರ ದೇವರ ಲಿಂಗವನ್ನು ಸ್ಥಳೀಯ ಮುಖಂಡರು, ಸಮೀತಿ ಸದಸ್ಯರು ಸೇರಿಕೊಂಡು ಪೂಜೆ ಮಾಡಿದರು.

ಅನಂತರ ಪ್ರಸಾದದ ವ್ಯವಸ್ಥೆ ಮಾಡಿದ್ದು ಎಲ್ಲ ಭಕ್ತರು ಸ್ವೀಕರಿಸಿ ದೇವರ ಆಶೀರ್ವಾದ ಪಡೆದುಕೊಂಡರು.

ವರದಿ : ರಾಹುಲ್ ಮಾದರ

Read All News