ರಾಜ್ಯ ಬಜೆಟ್ ! ದೀರ್ಘಾವಧಿಯ ಪರಿಣಾಮ, ಶಾಶ್ವತ ಯೋಜನೆಗಳಿಗೆ ಬೇಕಾಗಿದೆ ಕಾಯಕಲ್ಪ

  • Shivaraj
  • 5 Mar 2026 , 9:03 PM
  • Belagavi
  • 29

ಬೈಲಹೊಂಗಲ :  ನಾಳೆ ಸಿಎಂ ಸಿದ್ದರಾಮಯ್ಯ ಮಂಡಿಸಲಿರುವ 17 ನೇಯ ಐತಿಹಾಸಿಕ ರಾಜ್ಯ ಬಜೆಟ್ ನಲ್ಲಿ ಬೆಳಗಾವಿ ಜಿಲ್ಲೆಗೆ ಬೇಕಾಗಿದೆ ಹೊಸ ಕಾಯಕಲ್ಪ. 

ರಾಜ್ಯದ ಅತೀ ದೊಡ್ಡ ಜಿಲ್ಲೆ 16 ತಾಲೂಕು ಕೇಂದ್ರಗಳನ್ನು ಹೊಂದಿರುವ ಜಿಲ್ಲೆಗೆ ನೂತನ ಯೋಜನೆಗಳ ಜಾರಿ ಅವಶ್ಯಕವಾಗಿದೆ. ಸುವರ್ಣ ವಿಧಾನಸೌಧ ನಿರ್ಮಾಣ ಮಾಡಿ ದಶಕಗಳೇ ಕಳೆದರು ಬಾರದ ಸರ್ಕಾರಿ ಕಚೇರಿಗಳು, ಸ್ವಚ್ಛ ಸುಂದರ ನಗರವನ್ನಾಗಿ ಪರಿವರ್ತನೆ ಮಾಡುವದು. ಬೆಳೆಯುತ್ತಿರುವ ಜಿಲ್ಲೆಗೆ ಬೇಕಾಗಿದೆ. ಸರ್ಕಾರಿ ಶಾಲಾ,ಕಾಲೇಜುಗಳು, ಭಾರತ ಸರ್ಕಾರದ ಸ್ಟಾರ್ಟ ಅಪ್ ವ್ಯವಸ್ಥೆ, ಸ್ವ ಉದ್ಯೋಗಿಗಳಿಗೆ ಸರ್ಕಾರದ ನೆರವಿನ ಜೊತೆಗೆ ಲಕ್ಷಾಂತರ ನಿರುದ್ಯೋಗ ಯುವಕರಿಗೆ ಉದ್ಯಮಗಳು, ಐಟಿ, ಬಿಟಿ ಕಂಪನಿಗಳ ಸ್ಥಾಪನೆ ಸೇರಿದಂತೆ ಹಲವಾರು ವಿಶೇಷ ಅವಕಾಶಗಳು ಬೇಕಾಗಿವೆ. 

ರಾಜ್ಯ ಸರ್ಕಾರ ಮಂಡಿಸಲಿರುವ ಬಜೆಟ್ ಬೆಳಗಾವಿ, ಉತ್ತರ ಕರ್ನಾಟಕದ ಪರವಾಗಿರಲಿ... 

ಸ್ಮಾರ್ಟ್ ಸಿಟಿಯನ್ನು ಇನ್ನಷ್ಟು ಸ್ಮಾರ್ಟ್ ಮಾಡಲು ಸಿಎಂ ಸಿದ್ದ ರಾಮಯ್ಯನವರ ಅಭಯ ಹಸ್ತ ಈ ಗಡಿ ಜಿಲ್ಲೆಗೆ ಬೇಕಾಗಿದೆ.

ವರದಿಗಾರ : ರವಿಕಿರಣ್ ಯಾತಗೇರಿ 

Read All News