ಬೆಳಗಾವಿ: ಪ್ರಿಯಾಂಕಾ ಜಾರಕಿಹೊಳಿ ಕನಿಷ್ಟ ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಶಾಸಕ ಲಕ್ಷ್ಮಣ ಸವದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅಥಣಿ ಶಾಸಕ ಲಕ್ಷ್ಮಣ ಸವದಿ ಕ್ಷೇತ್ರದಲ್ಲಿ ಗ್ರಾಮಪಂಚಾಯಿತಿ ಹಿಡಿದು ಎಲ್ಲ ಹಂತದ ಮತದಾರರ ಜೊತೆ ಸಭೆ ನಡೆಸಲಿದ್ದೇವೆ ಎಂದು ಹೇಳಿ ಮತದಾರ ಈಗ ಬದಲಾಗಿದ್ದಾನೆ, ಮೊದಲೆಲ್ಲ ರಾಜಕೀಯ ನಾಯಕರು ಹೇಳುವುದನ್ನೆಲ್ಲ ನಂಬುತ್ತಿದ್ದ ಆದರೆ ಈಗ ಪ್ರಜ್ಞಾವಂತನಾಗಿದ್ದಾನೆ, ರಾಜ್ಯ ಸರ್ಕಾರ ಜಾರಿಗೊಳಿಸಿರುವ 5 ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಪಕ್ಷದ ಕೈ ಹಿಡಿಯಲಿವೆ, ಅವು ಮಹಿಳೆಯರ ಬದುಕನ್ನು ನಿರಾಳಗೊಳಿಸಿವೆ, ರಾಜ್ಯದ ಮಹಿಳಾ ಮತದಾರರ ಪೈಕಿ ಶೇಕಡಾ 90ರಷ್ಟು ಜನ ಕಾಂಗ್ರೆಸ್ ಪರ ಮತ ಚಲಾಯಿಸಲಿದ್ದಾರೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದ್ದಾರೆ.