ರಾಹುಲ ಗಾಂಧಿ ತನ್ನ ಹೇಳಿಕೆಯನ್ನು ಹಿಂಪಡೆಯಲು ರಾಜ್ಯ ವಕ್ತಾರ ಎಂ. ಬಿ. ಜಿರಲಿ ಆಗ್ರಹ

  • shivaraj bandigi
  • 3 Jul 2024 , 2:12 PM
  • Belagavi
  • 6003

ಬೆಳಗಾವಿ- ದೇಶವನ್ನು ಗೆದ್ದಿದ್ದೇವೆ ಎಂಬ ಭ್ರಮೆಯಲ್ಲಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ ಗಾಂಧಿ ಂಮಗನಿಗೆ ಕುಡಿಸಿದ ಹಾಗೇ ವರ್ತನೆ ಮಾಡುತ್ತಿದ್ದಾರೆಂದು ರಾಜ್ಯ ಬಿಜೆಪಿ ವಕ್ತಾರ ಎಂ. ಬಿ. ಜಿರಲಿ ಆರೋಪಿಸಿದರು. 

ಅವರು ಇಂದು ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ,  ರಾಹುಲ್ ಗಾಂಧಿ ಸದನದಲ್ಲಿ ಒಂದು ಮಾತನ್ನ ಹೇಳಿದ್ರು. ಹಿಂದೂಧರ್ಮಕ್ಕೆ ಹಿಂದೂ ವಿಚಾರಧಾರೆ ಮಾನ್ಯ ಮಾಡುವ ಜನರಿಗೆ ಹಿಂಶಾವಾಧಿಗಳು, ಉಗ್ರವಾದಿಗಳು ಅನ್ನುವ ರೀತಿಯಲ್ಲಿ  ಹೇಳಿಕೆ ನೀಡಿದದ್ದರು. ಈ ಹೇಳಿಕೆಯನ್ನು  ನಾವು ತೀವ್ರವಾಗಿ ಇದನ್ನು  ಖಂಡಿಸುತ್ತೇವೆ ಎಂದರು. 

ಸಂವಿಧಾನದ ಒಂದೇ ಒಂದು ಪುಟವನ್ನು  ಓದದೇ ಇರುವ ರಾಹುಲ್ ಗಾಂಧಿ,ದೇಶವನ್ನು ಗೆದ್ದಿದ್ದೇವೆ ಎಂಬ  ಭ್ರಮೆಯಲ್ಲಿ ಮಾತನಾಡುತ್ತಿದ್ದಾರೆ.

ಹೀಗಾಗಿ ರಾಹುಲ್ ಗಾಂಧಿ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕೆಂದು  ಎಂದು ಆಗ್ರಹಿಸಿದರು.

Read All News