e-lost ಅಪ್ಲಿಕೇಶನ ಮೂಲಕ ಕಳುವಾದ ಮೊಬೈಲಗಳ ಪತ್ತೆ

  • Krishna Shinde
  • 14 Jan 2024 , 11:04 PM
  • Belagavi
  • 217

ಬೆಳಗಾವಿ :ಸಿಇಐಆರ್ ಸೌಲಭ್ಯವನ್ನು ಉಪಯೋಗಿಸಿಕೊಂಡು ಬೆಳಗಾವಿ ನಗರದಲ್ಲಿ ಕಳುವು/ಕಾಣೆಯಾದ/ Mobile Snatching ಮೊಬೈಲ್‌ಗಳನ್ನು ಸಿಇಐಆರ್ ಸೌಲಭ್ಯದ ಮುಖಾಂತರ ಪತ್ತೆ ಹಚ್ಚಲಾಗುತ್ತಿದ್ದು, ಇಲ್ಲಿಯವರೆಗೆ 18 ಮೊಬೈಲ್‌ಗಳನ್ನು ಪತ್ತೆ ಹಚ್ಚಿದ್ದು ಸಾರ್ವಜನಿಕರಿಗೆ ಹಸ್ತಾಂತರಿಸಿದ್ದಾರೆ. 

ಇನ್ನು ಮುಂದೆ ಮೊಬೈಲ್ ಕಳುವು/ ಕಾಣಿಯಾದ/ Mobile Snatching ಆದ ಕೂಡಲೇ ಸಾರ್ವಜನಿಕರು ಹತ್ತಿರದ ಪೊಲೀಸ್ ಠಾಣೆಗಳಿಗೆ ಪೋರ್ಟಲ್‌ನಲ್ಲಿ ಪ್ರಕರಣ ಕೆಎಸ್‌ಪಿ (e-lost) ಅಪ್ಲಿಕೇಷನ್ ಮುಖಾಂತರ ದಾಖಲಿಸಿಲು  ಪೊಲೀಸರು ಸಾರ್ವಜನಿಕರಲ್ಲಿ ಕೋರಿದ್ದಾರೆ.

ಪತ್ತೆ ಕಾರ್ಯದಲ್ಲಿ ಪಾಲ್ಗೊಂಡ ಪಿಐ ಸಿಇಎನ್ ಪೊಲೀಸ್ ಠಾಣೆ ಜಾನ್ಸನ್ ಡಿಸೋಜಾ ಮತ್ತು ಅವರ ಸಿಬ್ಬಂಧಿಗಳ ಕಾರ್ಯವನ್ನು ಪೊಲೀಸ್ ಆಯುಕ್ತರು ಮತ್ತು ಉಪ ಪೊಲೀಸ್ ಆಯುಕ್ತರವರು ಶ್ಲಾಘಿಸಿದ್ದಾರೆ.

Read All News