ಸಹ್ಯಾದ್ರಿನಗರಕ್ಕೆ ಬೀದಿದೀಪ ವ್ಯವಸ್ಥೆ: ಕ್ಷಿಪ್ರ ಸ್ಪಂದಿಸಿ ಸಮಸ್ಯೆ ಬಗೆಹರಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ

  • 14 Jan 2024 , 7:40 AM
  • Belagavi
  • 126

ಬೆಳಗಾವಿ: ಇಲ್ಲಿನ ಸಹ್ಯಾದ್ರಿ ನಗರ ಭಾಗದಲ್ಲಿ ಸಾರ್ವಜನಿಕರ ಬೇಡಿಕೆಗೆ ಕ್ಷಿಪ್ರವಾಗಿ ಸ್ಪಂದಿಸಿದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಕೂಡಲೆ ಬೀದಿ ದೀಪಗಳ ವ್ಯವಸ್ಥೆ ಕಲ್ಪಿಸಿದ್ದಾರೆ. 

ಸ್ಥಳೀಯ ನಿವಾಸಿಗಳು ಬುಧವಾರ ಶಾಸಕರ ಗೃಹ ಕಚೇರಿಗೆ ಆಗಮಿಸಿ, ಅವರ ಪ್ರದೇಶದಲ್ಲಿ ಬೀದಿ ದೀಪಗಳ ಅನಾನುಕೂಲತೆ ಉಂಟಾಗಿರುವ  ಬಗ್ಗೆ ಸುಧೀರ್ಘವಾಗಿ ಚರ್ಚಿಸಿದ್ದರು.

ಇದರ ಬೆನ್ನಲ್ಲೆ,  ಬುಧವಾರ ರಾತ್ರಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಖುದ್ದಾಗಿ ಸಹ್ಯಾದ್ರಿನಗರ ಭಾಗಕ್ಕೆ ಭೇಟಿ ನೀಡಿ, ಮಹಾನಗರ ಪಾಲಿಕೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆದು ಬೀದಿ ದೀಪಗಳ ಅವಶ್ಯಕತೆಯ ಬಗ್ಗೆ ಪರಿಶೀಲಿಸಿದರಲ್ಲದೆ, ಕೂಡಲೇ ನಿವಾಸಿಗಳ ಅನುಕೂಲಕ್ಕಾಗಿ ಬೀದಿ ದೀಪಗಳನ್ನು ಅಳವಡಿಕೆ ಮಾಡಿ ಕೊಡಲು ಸೂಚಿಸಿದರು.

ಶಾಸಕಿ ಸೂಚನೆಯಂತೆ  ಮಹಾನಗರ ಪಾಲಿಕೆಯವರು ಗುರುವಾರ ಬೀದಿ ದೀಪಗಳ ಅಳವಡಿಕೆ ಪ್ರಕ್ರಿಯೆಯನ್ನು ಕೈಗೊಂಡಿದ್ದು ತಮ್ಮ ಸೂಚನೆಗೆ ತಕ್ಷಣ ಸ್ಪಂದಿಸಿ ಕಾರ್ಯಪ್ರವೃತ್ತರಾದ ಅಧಿಕಾರಿಗಳ ಕಾರ್ಯ ಸ್ವಾಗತಾರ್ಹ ಎಂದು ಲಕ್ಷ್ಮೀ ಹೆಬ್ಬಾಳಕರ ಹೇಳಿದ್ದಾರೆ.

Read All News