ಬೆಳಗಾವಿ :ಪ್ರಸ್ತುತ 545 ಪಿಎಸ್‌ಐ ಹುದ್ದೆಯಲ್ಲಿ ಅಕ್ರಮ ಕೇಳಿ ಬಂದಿರುವುದರಿಂದ ಅದನ್ನು ರಾಜ್ಯ ಸರ್ಕಾರ CID ತನಿಖೆಗೆ ಒಳಪಡಿಸಿದ್ದು, ಪ್ರಸ್ತುತ CID ತನಿಖೆಯು ಅಂತಿಮ ಹಂತಕ್ಕೆ ಬಂದಿದ್ದು, ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಮಾಡಿದವರನ್ನು ಡಿಬಾರ್ ಮಾಡಲಾಗುವುದು ಎಂದು ನೇಮಕಾತಿ ವಿಭಾಗದ DGP ರವರು ತಿಳಿಸಿದ್ದಾರೆ.
ಆದರೆ, ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ನ್ಯಾಯಯುತವಾಗಿ ಆಯ್ಕೆಯಾದ ಅಭ್ಯರ್ಥಿಗಳ ಭವಿಷ್ಯವೇನು ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ ಯಾರೋ ಕೆಲವು ಜನ ಮಾಡಿದ ತಪ್ಪಿಗೆ ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಪಾಪದ ಅಭ್ಯರ್ಥಿಗಳು ಕೂಡ ಬೆಲೆ ತೆರುವಂತಾಗಿದೆ. ಆದ ಕಾರಣ ಮರುಪರೀಕ್ಷೆ ರದ್ದುಗೊಳಿಸಿ, ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಿ ನ್ಯಾಯ ಒದಗಿಸಿ ಕೊಡುವಂತೆ ತಮ್ಮಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.
ಪ್ರಾಮಾಣಿಕವಾಗಿ ಆಯ್ಕೆಯಾದ ಅಭ್ಯರ್ಥಿಗಳ ಕೆಲವು ಪ್ರಶ್ನೆಗಳು,
1)ತಪ್ಪು ಮಾಡಿದವರನ್ನು ಡೀಬಾರ್ ಮಾಡ್ತಾ ಇದಿರಿ ಆದ್ರೆ, ಪ್ರಾಮಾಣಿಕವಾಗಿ ಆಯ್ಕೆಯಾದ ಅಭ್ಯರ್ಥಿಗಳ ಭವಿಷ್ಯದ ಕಥೆಯೇನು?
2)ಸುಮಾರು 10 ತಿಂಗಳು ತನಿಖೆ ನಡೆದು ತಪ್ಪಿತಸ್ಥರನ್ನು ಬಂಧಿಸಿದ ಮೇಲೆ, ಪ್ರಾಮಾಣಿಕರಿಗೆ ನೇಮಕಾತಿ ಆದೇಶ ಕೊಡದೆ ಇರಲು ಕಾರಣವೇನು?
3)PSI 545 ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು KSRP/IRB, DAR/CAR RSI, KSISF PSI ಸೇರಿದಂತೆ ಯಾವುದೇ ಹುದ್ದೆಗೂ ಅರ್ಜಿ ಹಾಕಿರುವುದಿಲ್ಲ. ಹಾಗಾದರೆ ಅವರಿಗೆ ಅನ್ಯಾಯ ಮಾಡಿದಂತೆ ಆಗುವುದಿಲ್ಲವೇ?
4) ಸುಮಾರು 138 ಮಹಿಳೆಯರು ಪ್ರಾಮಾಣಿಕವಾಗಿ ಆಯ್ಕೆಯಾಗಿದ್ದಾರೆ. ಅವರ ಮುಂದಿನ ಭವಿಷ್ಯ ಏನು?
5)ತಪ್ಪು ಮಾಡದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಕೊಡದಿರಲು ಸರ್ಕಾರಕ್ಕೆ ಹಿಂಜರಿಕೆ ಏಕೆ?
6)ಇತ್ತೀಚಿಗೆ ನಡೆದ KPTCL ಪರೀಕ್ಷೆಯಲ್ಲಿಯೂ ಅಕ್ರಮ ನಡೆದಿದ್ದು, ಸುಮಾರು 35 ಅಭ್ಯರ್ಥಿಗಳನ್ನು ಬಂಧಿಸಲಾಗಿದೆ. ಹಾಗೂ ಇದರಲ್ಲಿ ಬಗ್ಗೆ ವಿಧಾನಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಮಾನ್ಯ ಸಚಿವರು ಮುಂದಿನ ವಾರದಲ್ಲಿ ಕೀ ಉತ್ತರಗಳನ್ನು ಹಾಗೂ ಜನವರಿ ಮೊದಲ ವಾರದಲ್ಲಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ತಿಳಿಸಿರುತ್ತಾರೆ. ಹಾಗಾದರೆ,545 ಪಿಎಸ್‌ಐ ಹುದ್ದೆಗಳಿಗೆ ಮಾತ್ರ ಮರು-ಪರೀಕ್ಷೆ ಏಕೆ?