ಮತ್ತೊಂದು ಭೀಕರ ದರುಂತ: ವಿದ್ಯಾರ್ಥಿ ಸಾವು

  • 14 Jan 2024 , 6:50 PM
  • Belagavi
  • 79

ಬೆಳಗಾವಿ : ಲಾರಿ ಹರಿದು ಬಾಲಕ ಸ್ಥಳದಲ್ಲೇ ಸಾವು, ರೊಚ್ಚಿಗೆದ್ದ ಜನರಿಂದ ಕಲ್ಲು ತೂರಾಟ ನಡೆದ ಘಟನೆ ಬುಧವಾರ ನಡೆದಿದೆ.

ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ ನಡೆದಿದೆ.ಪೊಲೀಸರ ಎದುರೇ ಲಾರಿ ಮೇಲೆ ಕಲ್ಲು ತೂರಾಟ ನಡೆಸಿದ ಉದ್ರಿಕ್ತರು, ಓರ್ವ ಬಾಲಕ‌ ಸಾವು, ಇಬ್ಬರಿಗೆ ಗಂಭೀರ ಗಾಯವಾಗಿದೆ. ಅಪಘಾತ ಮಾಡಿದ ಲಾರಿ ಮೇಲೆ ಉದ್ರಿಕ್ತರಿಂದ ಕಲ್ಲು ತೂರಾಟ, ಲಾರಿ ಜಖಂ ಆಗಿದೆ. ಬೆಳಗಾವಿ ಕ್ಯಾಂಪ್ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಬೆಳಗಾವಿ ಕ್ಯಾಂಪ್ ಪ್ರದೇಶದ ವೆಲ್‌ಕಮ್ ಹೋಟೆಲ್ ಬಳಿ ಅಪಘಾತ ನಡೆದಿದೆ‌.

ರಸ್ತೆ ದಾಟುವಾಗ ಲಾರಿ ಹಾಯ್ದು ಸಾವುದ್ವಿಚಕ್ರ ವಾಹ‌‌‌ನದಲ್ಲಿ ರಸ್ತೆ ದಾಟುತ್ತಿದ್ದ ಅಕ್ಕ ತಮ್ಮ, ಇನ್ನೂಬ್ಬ ಪಾದಚಾರಿ ಬಾಲಕನಿಗೆ ಲಾರಿ ಡಿಕ್ಕಿ ರಸ್ತೆ ದಾಟುವ ವೇಳೆ ಲಾರಿ ಹರಿದು 10 ವರ್ಷದ ಅರ್ಹಾನ್ ಬೇಪಾರಿ ಸ್ಥಳದಲ್ಲೇ ಸಾವು ಆಗಿದೆ.

ಅಕ್ಕ ಅತಿಕಾ ಹಾಗೂ ಆಯುಷ್ ಎಂಬ ಇಬ್ಬರಿಗೂ ಗಂಭೀರ ಗಾಯ ಗಾಯಾಳುಗಳು ಜಿಲ್ಲಾಸ್ಪತ್ರೆಗೆ ರವಾನೆ ಸ್ಥಳದಲ್ಲಿ ಜಮಾಯಿಸಿದ ನೂರಾರು ಜನರು ಸ್ಥಳದಲ್ಲಿ ಬಿಗುವಿನ ವಾತಾವರಣ ಡಿಸಿಪಿ ಸ್ನೇಹಾ ಸ್ಥಳಕ್ಕೆ ಭೇಟಿ, ಪರಿಶೀಲನೆ ಬೆಳಗಾವಿ ದಕ್ಷಿಣ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿ ಘಟನೆ ನಡೆದಿದೆ.

Read All News