ಬೈಲಹೊಂಗಲ : ಡಾ. ಎಸ್.ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಆಚರಿಸಲಾಗುವ ಶಿಕ್ಷಕರ ದಿನಾಚರಣೆ ನಿಮಿತ್ಯ ಸನ್ 2004-05 ನೇಯ ಸಾಲಿನ ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳು ತಮಗೆ ಶಿಕ್ಷಣ ನೀಡಿದ ಗುರುಗಳಿಗೆ ವಿಡಿಯೋ ಕಾಲ ಮುಖಾಂತರ ಶುಭಾಶಯ ತಿಳಿಸಿದರು.
ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ಶಿಕ್ಷಣ ಸಂಸ್ಥೆಯ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿಗಳು ವರ್ಚ್ಯುಯಲ್ ಮಿಡಿಯಾ ಮುಖಾಂತರ ತಮ್ಮ ನೆಚ್ಚಿನ ಉಪನ್ಯಾಸಕ, ಬೆಳಗಾವಿಯ ಲೆಕ್ಕ ಪರಿಶೋಧಕ ವೀರಣ್ಣ ಮುರಗೋಡ ಅವರಿಗೆ ಮಾತನಾಡಿ ಶುಭಾಶಯ ವಿನಿಮಯ ಮಾಡಿದರು.
ವಿದ್ಯಾರ್ಥಿಗಳ ಶುಭಾಶಯ ಸ್ವೀಕರಿಸಿ ಮಾತನಾಡಿದ ವೀರಣ್ಣ ಮುರಗೋಡ, ಒಬ್ಬ ಶಿಕ್ಷಕನ ಕನಸು ತಾನು ಪಾಠ ನೀಡಿದ ವಿದ್ಯಾರ್ಥಿಯೊಬ್ಬ ಜೀವನದಲ್ಲಿ ಯಶಸ್ಸು ಕಂಡಾಗ ಆತನ ಬಗ್ಗೆ ಹೆಮ್ಮೆ ಅನಿಸುತ್ತದೆ. ನಾನೂ ನೀಡಿದ ಪಾಠ ಅವರ ಯಶಸ್ವಿಗೆ ಕಾರಣೀಕರ್ತವಾಗಿದೆ ಎಂದು ಕೃತಜ್ಞತಾ ಭಾವ ನಮ್ಮಿಲ್ಲಿರುತ್ತದೆ ಎಂದರು.
ವಿದ್ಯಾರ್ಥಿ ಮುಖಂಡರಾದ ಸುನೀಲ ಮರಕುಂಬಿ, ಪವಿತ್ರಾ ಪಾಲೇಕರ, ಪ್ರವೀಣ ಪಾಟೀಲ, ಕಿರಣ ಪಾಟೀಲ ಇತರರು ಈ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದರು.
ವರದಿ : ರವಿಕಿರಣ್ ಯಾತಗೇರಿ