ಬೆಳಗಾವಿ - ರಾಜಸ್ಥಾನ ಪೊಲೀಸರ ಜಂಟಿ ಕಾರ್ಯಚರಣೆ  4,00,000 ಕದ್ದ ಖದೀಮರು  ಅಂದರ

  • 14 Jan 2024 , 10:45 PM
  • Belagavi
  • 137

ಬೆಳಗಾವಿ :13-10-2022 ರಂದು ಬೆಳಗಾವಿ ನಗರದ ಮಾರ್ಕೇಟ್ ಪೊಲೀಸ್ ಠಾಣೆಯ ವ್ಯಾಪ್ತಿಯ ಭಾಗವಾನ ಗಲ್ಲಿಯ ಸದ್ರುದ್ದೀನ್ ಚೌದರಿ ಇವರ ಕಿರಾಣಾ ಹೋಲಸೆಲ್  ಅಂಗಡಿಯಲ್ಲಿದ್ದ 4,00,000/-ರೂ ಹಣವನ್ನು ಅಂಗಡಿಯಲ್ಲಿದ್ದ ಉತ್ತರಪ್ರದೇಶ ರಾಜ್ಯದ ಮೂರು ಜನ ಕೆಲಸಗಾರರು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಮಾರ್ಕೇಟ್ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 168/2022 ಕಲಂ 381 ಐ.ಪಿ.ಸಿ ನೇ ಪ್ರಕರಣ ದಾಖಲಾಗಿತ್ತು.

ಹಿರಿಯ್  ಅಧಿಕಾರಿಗಳ ಮಾರ್ಗದರ್ಶನದಲ್ಲಿ  ಎನ್ ವಿ ಬರಮನಿ, ಎಸಿಪಿ, ಮಾರ್ಕೇಟ್ ಉಪವಿಭಾಗ ಬೆಳಗಾವಿ ನಗರ ರವರ ನೇತೃತ್ವದಲ್ಲಿ ಮಲ್ಲಿಕಾರ್ಜುನ ತುಳಸಿಗೇಲಿ, ಪಿಐ, ಹುಸೇನ ಕೆರೂರ, ಪಿ.ಎಸ್.ಐ, ಶಶಿಕುಮಾರ ಕುರಳ ಪಿ.ಎಸ್.ಐ ಹಾಗೂ ಲಕ್ಷಣ ಎಸ್ ಕಡೋಲ್ಕರ ಸಿಎಚ್‌, ಶಂಕರ ಕುಗಳೊಳ್ಳಿ ಸಿಪಿಸಿ, ಖಾದರಸಾಬ ಖಾನಮ್ಮನವರ ಸಿಪಿಸಿ ರವರ ತಂಡ ಸದರ ಪ್ರಕರಣದಲ್ಲಿಯ ಆರೋಪಿತರ ಬಗ್ಗೆ ಸೂಕ್ತ ಮಾಹಿತಿ ಕಲೆ ಹಾಕಿ ರಾಜಸ್ಥಾನ ರಾಜ್ಯದಲ್ಲಿ ರಾಜಸ್ಥಾನ ಪೊಲೀಸ್‌ರ ಸಹಕಾರದಿಂದ ಆರೋಪಿತರನ್ನು ಪತ್ತೆ ಮಾಡಿ ಕಳ್ಳತನವಾದ 4,00,000/-ರೂ ಹಣವನ್ನು ವಶಪಡಿಸಿಕೊಂಡು 19-10-2022 ರಂದು ಆರೋಪಿಗಳನ್ನು  ನ್ಯಾಯಾಲಯಲಕ್ಕೆ ಹಾಜರಿಪಡಿಸಿದ್ದಾರೆ.

ಮಾರ್ಕೇಟ್ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯದಕ್ಷತೆಯನ್ನು ಮಾನ್ಯ ಪೊಲೀಸ್ ಆಯುಕ್ತರು ಹಾಗೂ ಮಾನ್ಯ ಪೊಲೀಸ್ ಉಪ ಆಯುಕ್ತರು ರವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

Read All News