ಬೈಲಹೊಂಗಲ: ಸಮೀಪದ ಆನಿಗೋಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ
ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಅಧ್ಯಕ್ಷರಾಗಿ
ಶ್ರೀ ಸುನೀಲ ಮರಕುಂಬಿ ಹಾಗೂ ಉಪಾಧ್ಯಕ್ಷರಾಗಿ ಶ್ರೀ ನಾಗಪ್ಪ ಜಕಾತಿ ಅವರು ಸತತವಾಗಿ ಎರಡನೇ ಭಾರಿಗೆ ಅವಿರೋಧವಾಗಿ ಆಯ್ಕೆಯಾದರು.
ನಂತರ ಮಾತನಾಡಿದ ಉದ್ಯಮಿ ಹಾಗೂ ಸಹಕಾರಿಯ ನೂತನ ಅಧ್ಯಕ್ಷ ಸುನೀಲ ಮರಕುಂಬಿ ಅವರು ಗ್ರಾಮದ ರೈತರ ಮತ್ತು ಸಾರ್ವಜನಿಕ ಜೀವನದಲ್ಲಿ ನನ್ನನ್ನು ನಾನು ತೋಡಿಗಿಸಿಕೊಂಡು, ಸಹಕಾರ ಮತ್ತು ಸಹಬಾಳ್ವೆ ತತ್ವದಲ್ಲಿ ಸೇವೆಯನ್ನು ಮಾಡುತ್ತಿದ್ದೆನೆ ಅಮೂಲ್ಯವಾಗಿರುವಂತಹ ಪ್ರೇರಣೆ, ಸಹಕಾರ ಸದಾ ಇರಲಿ, ಸಂಘವನ್ನು ಇನ್ನು ಉತ್ತರೋತ್ತರವಾಗಿ ಬೆಳೆಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಆರೂಢ ಕೆಸಪ್ಪನಟ್ಟಿ,ದುಂಡಪ್ಪ ಸುಣಗಾರ,ಬಸಲಿಂಗಯ್ಯ ಚಿಕ್ಕಮಠ,ಮಾರುತಿ ಮಾದರ,ಯಲ್ಲಪ್ಪ ಉಪ್ಪಾರ,ಮಂಜುನಾಥ ಆದೆಣ್ಣವರ ,ಮಲ್ಲೆಶಪ್ಪ ಕುರಿ,ಈರವ್ವ ಹಿರೇಮಠ,ತಾಯವ್ವ ಆದೆಣ್ಣವರ,ಚುನಾವಣಾ ಅಧಿಕಾರಿಗಳು,ಸಂಘದ ಸಿಬ್ಬಂದಿ ವರ್ಗ,ಕೆಎಂಎಪ್ ನಿರ್ದೇಶಕರು,ಗ್ರಾಮ ಪಂಚಾಯಿತಿ ಹಾಲಿ ಹಾಗೂ ಮಾಜಿ ಸದಸ್ಯರು,ಗ್ರಾಮದ ಹಿರಿಯರು,ಮುಖಂಡರು,ಯುವಕರು ಉಪಸ್ಥಿತರಿದ್ದರು.