ಅಥಣಿ : ಬೆತ್ತಲೆ ಸ್ಥಿತಿಯಲ್ಲಿ ವೃದ್ದೆ ಶವ ಪತ್ತೆಯಾಗಿದ್ದು ಗ್ರಾಮಸ್ಥರು ಬೆಚ್ಚಿ ಬಿದ್ದ ಘಟನೆ ಅಥಣಿ ತಾಲೂಕಿನ ಬೆವನೂರ ಗ್ರಾಮದಲ್ಲಿ ನಡೆದಿದೆ.
ನಿನ್ನೆ ತಡರಾತ್ರಿ ವೃದ್ದೆ ವಾಸವಿರುವ ಮನೆಯ ಕಿಡಕಿ ಒಡೆದು ಬಂಗಾರದ ಆಭರಣ ಕಳವು ಮಾಡಿ ಕೊಲೆ ಮಾಡಿರಿವ ಶಂಕೆ ವ್ಯಕ್ತಪಡಿಸಿದ್ದಾರೆ.
ಅಥಣಿ ತಾಲೂಕಿನ ಬೆವನೂರ ಗ್ರಾಮದ "ಪುಲಾಭಾಯಿ ಲಕ್ಷಣ ಯಮಗಾರ ವಯಸ್ಸು: 85 ಕೊಲೆಯಾಗಿರುವ ಶಂಕೆ ಇದೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಯಲ್ಲಿ ನಡೆದ ಘಟನೆ ಇದಾಗಿದೆ.
ಘಟನಾ ಸ್ಥಳಕ್ಕೆ ಅಥಣಿ ಪೊಲೀಸ್ ಜಮಾವನೆ ಪರಿಶೀಲನೆ ನಡೆಸಿದ್ದಾರೆ. ಬೆಳಗಾವಿ ಡಾಗ್ ಸ್ಕಾಡ್ ಪೊಲೀಸ್ ಮಾಹಿತಿ ಕಲೆ ಹಾಕಲಾಗುತ್ತಿದೆ. ಪೊಲೀಸ್ ವರದಿ ಬಂದ ನಂತರವೆ ವೃದ್ದೆ ಸಾವಿಗೆ ನಿಖರ ಕಾರಣ ಸತ್ಯಾಸತ್ಯತೆ ಗೊತ್ತಾಗಲಿದೆ.