ಬೆಳಗಾವಿ: ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಸ್ವಪ್ನ ಬುಕ್ ಹೌಸ್ ನಿಂದ ಪ್ರತಿ ಪುಸ್ತಕ ಖರೀದಿಸುವವರಿಗೆ ಶೇ. 50 ರಷ್ಟು ರಿಯಾಯಿತಿ ದರ ನೀಡಲಾಗುತ್ತಿದೆ ಇದರ ಸದುಪಯೋಗವನ್ನು ಪುಸ್ತಕ ಪ್ರೇಮಿಗಳು ಪಡೆದುಕೊಳ್ಳಬೇಕೆ ಎಂದು ಬೆಳಗಾವಿ ಸ್ವಪ್ನ ಬುಕ್ ಹೌಸ್ ನ ವ್ಯವಸ್ಥಾಪಕ ರಘು ಎಂ.ವಿ.ಹೇಳಿದರು.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಸ್ವಪ್ನ ಬುಕ್ ಹೌಸ್ ಈ ಸಲವು ಕನ್ನಡ ರಾಜ್ಯೋತ್ಸವ ಪ್ರಯುಕ್ತ ಓದುಗರಿಗೆ ಹಲವು ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಭಾರತದ ಅತೀ ದೊಡ್ಡ ಪುಸ್ತಕ ಮಳಿಗೆ ಎಂದು ಹೆಸರುವಾಸಿಯಾಗಿರುವ ಸ್ವಪ್ನ ಬುಕ್ ಹೌಸ್ ವತಿಯಿಂದ ಬರವಣಿಗೆಯ ಸಲುವಾಗಿ ಆಟ್೯ ಗ್ಯಾಲರಿ ಎಂಬ ಹೊಸ ಕಾರ್ಯಕ್ರಮ ಮಾಡಲಾಗುತ್ತಿದೆ.
ಕಳೆದ ಬಾರಿ ಯಶಸ್ವಿಯಾಗಿದೆ. ಈ ಬಾರಿ ಎರಡೂ ವಿಭಾಗದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು. ಕನ್ನಡ ರಾಜ್ಯೋತ್ಸವದ ಅಂಗವಾಗಿ ಈ ತಿಂಗಳು ಪೂರ್ತಿ ಕನ್ನಡದ ಪುಸ್ತಕಗಳಿಗೆ ಶೇ. 10 ರಿಂದ 25ರ ವರೆಗೆ ವಿಶೇಷ ರಿಯಾಯಿತಿ ಇರುತ್ತದೆ.
ಆಯ್ದ ಕನ್ನಡ ಪುಸ್ತಕಗಳಿಗೆ ಶೇ. 50 ರಷ್ಟು ರಿಯಾಯಿತಿ ಇದೆ. ಈ ಅವಧಿಯಲ್ಲಿ 300 ಮೌಲ್ಯದ ಪುಸ್ತಕಗಳನ್ನು ಕೊಂಡವರಿಗೆ ವಿಶೇಷ ರಿಯಾಯಿತಿ ಕಾಡ್೯ ಕೊಡಲಾಗುತ್ತಿದೆ.
ಈ ಕಾಡ್೯ ಪಡೆದವರಿಗೆ ವರ್ಷ ಪೂರ್ತಿ ಶೇ. 10 ರಷ್ಟು ರಿಯಾಯಿತಿ ದರದಲ್ಲಿ ಪುಸ್ತಕ ಖರೀದಿಯ ಬಹುದಾಗಿದೆ ಎಂದರು ಅಲ್ಲದೆ ಹೊಸ ಬರಹಗಾರರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸ್ವಪ್ನ ಬುಕ್ ಹೌಸ್ ವೇದಿಕೆ ಕಲ್ಪಿಸಿಕೊಡಲಾಗುತ್ತಿದೆ. ಇದರ ಲಾಭವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.