ಬೆಳಗಾವಿ :
ಬೆಳಗಾವಿ ಲಕ್ಷ್ಮೀಟೇಕಡಿ ಹುಕ್ಕೇರಿ ಶ್ರೀ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದಲ್ಲಿ ಪಿ. ಜಿ. ಹುಣಶ್ಯಾಳ ಸಿದ್ಧಲಿಂಗ ಕೈವಲ್ಯಾಶ್ರಮದ.ಶ್ರೀ ನಿಜಗುಣ ದೇವರ ಬದುಕು ಬರಹ ಕುರಿತು ವಿಚಾರ ಸಂಕಿರಣ ಶನಿವಾರ ದಿನಾಂಕ 09-12-2023 ರಂದು ಮುಂಜಾನೆ 10-30 ಕ್ಕೆ ನಡೆಯಲಿದೆ.
ಸಾನಿಧ್ಯವನ್ನು ಶ್ರೀ ಮ.ನಿ.ಪ್ರ. ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ರುದ್ರಾಕ್ಷಿಮಠ, ನಾಗನೂರು ಹಾಗೂ ಬೆಳಗಾವಿ ಶ್ರೀ ಮ.ನಿ.ಪ್ರ. ಗುರುಸಿದ್ಧ ಮಹಾಸ್ವಾಮಿಗಳು ಕಾರಂಜಿಮಠ, ಬೆಳಗಾವಿ ಇವರು ವಹಿಸಲಿದ್ದಾರೆ , ಶ್ರೀ ಷ.ಬ್ರ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ-ಹುಕ್ಕೇರಿ, ಬೆಳಗಾವಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಲಿದೆ
ಉದ್ಘಾಟನೆಯನ್ನು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಕೆ. ಬಿ. ಗುಡಸಿ ನೆರವೇರಿಸಲಿದ್ದಾರೆ ,ಬೆಳಗಾವಿ ಸಾಹಿತಿಗಳಾದ ಡಾ. ರಾಮಕೃಷ್ಣ ಮರಾಠ ಅವರು ಅಶಯ ನುಡಿಆಡಲಿದ್ದಾರೆ ಉಪನ್ಯಾಸವನ್ನ ಶ್ರೀ ಸದ್ಗುರು ಶಿವಾನಂದ ಗುರೂಜಿ ಅಲೌಕಿಕ ಆಶ್ರಮ, ನಿಲಜಿ ಅವರು ಶ್ರೀ ನಿಜಗುಣ ದೇವರ 'ಗುರು ಪರಂಪರೆ' ಬಗ್ಗೆ ನೀಡಲಿದ್ದಾರೆ ಶ್ರೀ ಶೋ.ಬ್ರ. ಗಣಪತಿ ಮಹಾರಾಜರು ಗುರುದೇವಾಶ್ರಮ, ಬೀದರ ಅವರು 'ಶ್ರೀ ನಿಜಗುಣ ದೇವರ ಬದುಕು' ವಿಷಯ ಕುರಿತು , ಶ್ರೀ ನೀಜಗುಣದೇವರ ಸಮಾಜ ಸೇವೆ ವಿಷಯ ಕುರಿತು ಬೆಳಗಾವಿ ಕಾ.ನಿ.ಪ. ಜಿಲ್ಲಾಧ್ಯಕ್ಷರಾದ ದಿಲೀಪಕುಮಾರ ಕುರಂದವಾಡೆ ಉಪನ್ಯಾಸ ನೀಡಲಿದ್ದಾರೆ ಡಾ. ಜಿ. ಜಿ. ಕೆಂಪಣ್ಣವರ ಅವರು ಶ್ರೀ ನೀಜಗುಣದೇವರ ಕೈವಲ್ಯ ಕನ್ನಡಿ ಕೃತಿ' ಬಗ್ಗೆ ಮಾತನಾಡಲಿದ್ದಾರೆ , ಶ್ರೀ ನಿಜಗುಣದೇವರ 'ಭಾರತಕ್ಕೋಬ್ಬನೇ ಭಾರತೀಶ ಕೃತಿ' ಬಗ್ಗೆ 'ಡಾ. ಗುರುದೇವಿ ಹುಲೆಪ್ಪನವರಮಠ ಅವರು ಉಪನ್ಯಾಸ ನೀಡಲಿದ್ದಾರೆ ಶ್ರೀ ನಿಜಗುಣದೇವರ 'ಕೈವೈಲ್ಯ ಕಿರಣ ಕೃತಿ ಬಗ್ಗೆ ಶಿರಿಷ ಜೋಶಿ ಸಾಹಿತಿಗಳು ಮಾತನಾಡಲಿದ್ದಾರೆ ,ಶ್ರೀ ನಿಜಗುಣದೇವರ 'ಶ್ರೀ ಸಿದ್ಧಲಿಂಗ ಯತಿರಾಜರು ಕೃತಿ ಬಗ್ಗೆ ಪ್ರಕಾಶ ಗಿರಿಮಲ್ಲನ್ನವರ ಸಾಹಿತಿಗಳು ಉಪನ್ಯಾಸ ನೀಡುತ್ತಾರೆ ನಿರೂಪಣೆಯನ್ನ ಟಿ. ವಿ. ನಿರೂಪಕಿ ಸುನಿತಾ ದೇಸಾಯಿಅವರು ಮಾಡಲಿದ್ದಾರೆ
ಕಾರ್ಯಕ್ರಮಕ್ಕೆ ಸುವಿಚಾರ ಚಿಂತನ ಬಳಗ, ಮಹಿಳಾ ರುದ್ರ ಬಳಗ, ಬೆಳಗಾವಿ ಹುಕ್ಕೇರಿ ಹಿರೇಮಠದ ಸಮಸ್ತ ಶಿಷ್ಯ ಮಂಡಳಿ ಸ್ವಾಗತ ಕೊರಿದ್ದಾರೆ