ಅಥಣಿ : ತಾಲೂಕಿನ ಜಂಬಗಿ ಗ್ರಾಮದ ರೈತ ಬೀರಪ್ಪ ರಾಮಚಂದ್ರ ಕೊಳೆಕರ (26) ಸಾಲ ಭಾದೆ ತಾಳಲಾರದೆ ನೇಣಿಗೆ ಶರಣಾದ ಘಟನೆ ನಿನ್ನೆ ತಡ ರಾತ್ರಿ ನಡೆದಿದೆ. ಕಲ್ಲೂತಿ ಗ್ರಾಮದ ಕರೆಪ್ಪನ ತೋಟದ ಗದ್ದೆಯಲ್ಲಿದ್ದ ಬೇವಿನ ಮರಕ್ಕೆ ನೇಣು ಬಿಗಿದುಕೊಂಡು ಸಾವಿಗೆ ಶರನಾಗಿದ್ದಾನೆ. ಕೃಷಿ ಚಟುವಟಿಕೆಗಾಗಿ ಸುಮಾರು ಎಂಟು ಲಕ್ಷ ಸಾಲ ಮಾಡಿದ್ದ ಎಂದು ತಿಳಿದುಬಂದಿದೆ
ಮಳೆಗಾಲ ವಿಳಂಬವಾದ ಕಾರಣ ಭೂಮಿಯಲ್ಲಿ ಬೆಳೆದ ಕಬ್ಬು ಸಂಪೂರ್ಣ ಒಣಗಿ ರೈತ ಸಾಲ ತೀರಿಸಲಾಗದೆ ಸ್ವಾಭಿನಕ್ಕಂಜಿ ರಾತ್ರಿ ತಮ್ಮ ಮನೆಯ ಪಕ್ಕದ ಜಮೀನಿನಲ್ಲಿದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸ್ಥಳಕ್ಕೆ ಅಥಣಿ ಪೋಲಿಸ್ ರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ ಯುವಕನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ವರದಿ: ರಾಹುಲ್ ಮಾದರ