ಸತೀಶ ಜಾರಕಿಹೊಳಿ vs ಲಕ್ಷ್ಮಣ ಸವದಿ ನಡುವಿನ ವೈಮನಸ್ಸು ! ಎಂಟ್ರಿ ಕೊಟ್ಟ ಸಿಎಂ ಸಿದ್ದರಾಮಯ್ಯ

  • shivaraj B
  • 6 Aug 2024 , 3:47 PM
  • Chikodi
  • 936

ಚಿಕ್ಕೋಡಿ : ಸತೀಶ ಜಾರಕಿಹೊಳಿ, ಲಕ್ಷ್ಮಣ ಸವದಿ ಇಬ್ಬರನ್ನೂ ತಮ್ಮ ಕಾರಿನಲ್ಲಿಯೇ ಕರೆದುಕೊಂಡು ಹೋಗಿ ರಾಜಕೀಯ ದ್ವೇಷದ ಬೆಂಕಿಗೆ ತಣ್ಣಿರೆರಚಲು ಸಿದ್ದರಾಮಯ್ಯ ಪ್ರಯತ್ನ ನಡೆಸಿದರು. 

ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಥಣಿಯಲ್ಲಿ ಕಡಿಮೆ ಲೀಡ್ ಸಿಕ್ಕಿದ್ದಕ್ಕೆ ಸವದಿ ವಿರುದ್ಧ ಗರಂ ಆಗಿದ್ದ ಜಾರಕಿಹೊಳಿ.

ಚಿಕ್ಕೋಡಿ ಲೋಕಸಭೆಯಿಂದ ಸತೀಶ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಸ್ಪರ್ಧಿಸಿ, ಆಯ್ಕೆಯಾಗಿದ್ದರು ಬಳಿಕ ಬಹಿರಂಗವಾಗಿಯೇ ಲಕ್ಷ್ಮಣ ಸವದಿ ವಿರುದ್ಧ ಹರಿಹಾಯ್ದಿದ್ದ ಸಚಿವ ಸತೀಶ ಜಾರಕಿಹೊಳಿ. 

ಇತ್ತ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ವಿರುದ್ದವೂ ಸಹ ಕೆಂಡಾಮಂಡಲವಾಗಿದ್ದರು. 

ಕುಡಚಿ ಶಾಸಕ ತಮ್ಮಣ್ಣವರರೊಂದಿಗೆ ಸತೀಶರನ್ನು ರಾಜಕೀಯವಾಗಿ ಮಣಿಸಲು ಕ್ಲೋಸ್ ಡೋರ್ ಮೀಟಿಂಗ್ ಮಾಡಿದ್ದ ಸವದಿ.

ದಿನೇದಿನೇ ತಾರಕ್ಕೇರುತ್ತಿದ್ದ ಜಾರಕಿಹೊಳಿ ಹಾಗೂ ಸವದಿ ನಡುವಿನ ಇಬ್ಬರ ನಡುವಿನ ಅಂತರ.

ಪ್ರವಾಹ ಪರಿಸ್ಥಿತಿ ವೀಕ್ಷಿಸಲು ಜುಗುಳ ಗ್ರಾಮಕ್ಕೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ವಾಪಸ್ಸಾಗುವಾಗ ಇಬ್ಬರನ್ನು ತಮ್ಮ ಕಾರಿನಲ್ಲಿಯೇ ಕೂರಿಸಿಕೊಂಡು ಹೋದರು. 

ಲಕ್ಷ್ಮಣ ಸವದಿ ಹಾಗೂ ಸತೀಶ ಜಾರಕಿಹೊಳಿ ಸಿಟ್ಟು ದಮನಕ್ಕೆ ಮುಂದಾದ ಸಿಎಂ ಸಿದ್ದರಾಮಯ್ಯ.

Read All News