ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆ ಹಲ್ಯಾಳದಲ್ಲಿ ಪ್ರಪ್ರಥಮ ಬಾರಿಗೆ ಸುಮಾರು 30 ವರ್ಷಗಳ ನಂತರ 2011/2012/ ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಂದ ಗುರುವಂದನ ಕಾರ್ಯಕ್ರಮ ಹಾಗೂ ಸ್ನೇಹಿತರ ಸಮ್ಮಿಲನ ಸಮಾರಂಭ ಅದ್ದೂರಿಯಾಗಿ ನಡೆಯಿತು
ಕಾರ್ಯಕ್ರಮದಲ್ಲಿ ಒಂದೇ ತರಗತಿಯಲ್ಲಿ ಕಲಿತು ನೌಕರಿ ಹಾಗೂ ವಿದ್ಯಾ ವಿದ್ಯಾಭ್ಯಾಸಕ್ಕಾಗಿ ತೆರಳಿದ ವಿದ್ಯಾರ್ಥಿಗಳು ಒಂದೆಡೆ ಸೇರಿ ಸಂಭ್ರಮಿಸಿದರು
ಇದೇ ವೇಳೆ ಸುರೇಶ್ ಸಾಂಗೋಲಿ ಶಿಕ್ಷಕರು ಮಾತನಾಡಿದ ವಿದ್ಯಾರ್ಥಿ ಜೀವನವು ತುಂಬಾ ಅತ್ಯಮೂಲ್ಯವಾದದ್ದು ನಿರಂತರ ಪರಿಶ್ರಮದಿಂದ ಉನ್ನತ ಮಟ್ಟ ತಲುಪಬಹುದು ಆದ್ದರಿಂದ ವಿದ್ಯಾರ್ಥಿಗಳು ದುಶ್ಚಟಕ್ಕೆ ಬಲಿಯಾಗದೆ ತಮ್ಮ ಜೀವನವನ್ನು ನಿರೂಪಿಸಿಕೊಳ್ಳಬೇಕೆಂದರು
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಮಂಜುನಾಥ್ ಹತ್ತಿ. ಎಸ್‌ಡಿಎಂಸಿ ಅಧ್ಯಕ್ಷರಾದ ದೀಪಕ ಮುರಗುಂಡಿ, ಉಗಾರ್ ಸರ.ಹಾಗೂ.2012. ಸಾಲಿನ ವಿದ್ಯಾರ್ಥಿಗಳಿಗೆ ಕಲಿಸಿದ ಗುರುಗಳಾದಂತ.ಐ ಯಾಮ್ ಅತ್ತಾರ್ . ಮಲ್ಲಪ್ಪ ಎಸ್ ಸುಲಾರೇ. ಸುರೇಶ ಜೀ ಸಾಂಗುಲಿ . ದಯಾನಂದ್ ಎಂ ಕಾಂಬಳೆ ಸರ್. ಶ್ರೀಮತಿ ಬಬಿತಾ ಡಿ ಜಮಾದಾರ್ . ಶಾಂತಾಬಾಯಿ ಎಂ ವಾಲಿಕಾರ್ .ಅನಿತಾ ಬಾಬುಗೊಂಡ . ಅನಂತ ಪಡನಾಡ್ . ಅಪ್ಪಣ್ಣ ಕಾಂಬಳೆ . ಇನ್ನು ಹಲವಾರು ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು
ನಂತರ ಶಿಕ್ಷಕರಿಗೆ 2012. ನೇ ಸಾಲಿನ ವಿದ್ಯಾರ್ಥಿಗಳಿಂದ ಎಲ್ಲಾ ಶಿಕ್ಷಕರಿಗೆ ಸತ್ಕಾರ ಮಾಡಿ ಗೌರವಿಸಲಾಯಿತು
ಇದೇ ಸಂದರ್ಭದಲ್ಲಿ ಪ್ರೌಢಶಾಲೆ ವಿದ್ಯಾರ್ಥಿಗಳು ಸಮಸ್ತ ಹಲ್ಯಾಳ ಗ್ರಾಮಸ್ಥರು ಭಾಗವಹಿಸಿದ್ದರು