ವಿಶ್ವಕರ್ಮ ಸಮಾಜವು ಹಿಂದುಳಿದ ಸಮಾಜವಲ್ಲ ಜಗತ್ತಿನ ನಿರ್ಮಾಣದಲ್ಲಿ ವಿಶ್ವಕರ್ಮರ ಪಾತ್ರ ಮಹತ್ವದ್ದಾಗಿದೆ. ವಿಶ್ವಕರ್ಮ ಸಮಾಜದ ಪೂರ್ವಜರು ಅದ್ಭುತವಾಗಿ ಕೆಲಸ ಮಾಡಿದ್ದು ಅವರ ಶ್ರಮಕ್ಕೆ ಕಲೆಗೆ ಬೆಲೆ ಕಟ್ಟಲಾಗದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಹೇಳಿದರು.
ಪಡುಕುತ್ಯಾರು ಆನೆಗುಂದಿ ಮಹಾಸಂಸ್ಥಾನಕ್ಕೆ ಭೇಟಿ ನೀಡಿದ ಅವರು ಶ್ರೀಕಾಳಹಸ್ತೇಂದ್ರ ಮಹಾಸ್ವಾಮೀಜಿಯವರನ್ನು ಭೇಟಿಮಾಡಿ, ಮಹಾಸಂಸ್ಥಾನ ಮತ್ತು ಮಾತೃ ಮಂಡಳಿಯ ವತಿಯಿಂದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
2013ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರವು ಸ್ಥಾಪಿಸಿದ್ದ ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ಮತ್ತಷ್ಟು ಶಕ್ತಿ ನೀಡಿ, ಪ್ರತಿಷ್ಠಾನ ಮತ್ತು ಸ್ವಾಮೀಜಿಯವರ ಮನವಿಯಂತೆ ಸಮಾಜದ ಅಭಿವೃದ್ಧಿಗೆ ಪೂರಕವಾಗುವ ಕಾಠ್ಯಕ್ರಮಗಳನ್ನು ಜೋಡಿಸಲಾಗುವುದು. ಶ್ರೀ ಆನೆಗುಂದಿ ಮಠದ ಮುಂದಿನ ಯೋಜನೆಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಮನವಿ ಸಲ್ಲಿಕೆ ಆನೆಗುಂದಿ ಮಹಾ ಸಂಸ್ಥಾನದಲ್ಲಿ ಯಾತ್ರಿ
ನಿವಾಸ ನಿರ್ಮಾಣಕ್ಕೆ 3 ಕೋಟಿ ರೂ.ವಿಶೇಷ ಅನುದಾನ ಒದಗಿಸುವಂತೆ ಮತ್ತು ಆನೆಗುಂದಿ ಮಹಾಸಂಸ್ಥಾನವನ್ನು ಪ್ರವಾಸೋದ್ಯಮ ಇಲಾಖೆಯ ಜಿಲ್ಲಾ ಪ್ರವಾಸಿ ತಾಣಗಳ ಯಾದಿಯಲ್ಲಿ ಸೇರ್ಪಡೆಗೊಳಿಸುವಂತೆ ಮನವಿ ನೀಡಲಾಯಿತು. ಆನೆಗುಂದಿ ಮಹಾಸಂಸ್ಥಾನ ಮತ್ತು ಕಳತ್ತೂರು ಮೊರಾರ್ಜಿ ದೇಸಾಯಿ ವಸತಿ ಶಿಕ್ಷಣ ಸಂಸ್ಥೆಯವರೆಗೆ ಸರಕಾರಿ ಬಸ್ ಓಡಾಟ ಪ್ರಾರಂಭಿಸುವಂತೆ ಕಾಪು ಜಯರಾಮ ಆಚಾರ್ಯ ಮನವಿ ಮಾಡಿದರು.
ಆನೆಗುಂದಿ ಶ್ರೀಗಳು ಮಾತನಾಡಿ, ವಿಶ್ವಬ್ರಾಹ್ಮಣ ಸಮಾಜವು ಕಲೆ, ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಬಹಳಷ್ಟು ಮುಂದಿದೆ. ಆದರೆ ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ತೀರಾ ಹಿಂದುಳಿದಿದೆ. ಸಮಾಜದ ಜನರನ್ನು ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಗೆ ಕರೆ ತಂದು ಸಮಾಜದ ಅಭ್ಯುದಯಕ್ಕಾಗಿ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳುವಂತೆ ಮತ್ತು ಶ್ರೀ ಮಠದ ಕಾರ್ಯಕ್ರಮಗಳಿಗೆ ಸಹಕರಿಸುವಂತೆ ಮನವಿ ಮಾಡಿದರು..
ಆನೆಗುಂದಿ ಪ್ರತಿಷ್ಠಾನ ಮತ್ತು ಚಾತುರ್ಮಾಸ್ಯ ನಿರ್ವಹಣ ಸಮಿತಿ ಅಧ್ಯಕ್ಷ ವಿ. ಶ್ರೀಧರ ಆಚಾ ವಡೇರಹೋಬಳಿ ಅಧ್ಯಕ್ಷತೆ ವಹಿಸಿದ್ದರು. ಕಾಪು ತಹಶೀಲ್ದಾರ್ ನಾಗರಾಜ ವಿ. ನಾಯ್ಕಡ, ಕಾಂಗ್ರೆಸ್ ಮುಖಂಡರಾದ ಮಿಥುನ್ ರೈ ಮಂಗಳೂರು, ಉದಯಕುಮಾರ್ ಶೆಟ್ಟಿ ಮುನಿಯಾಲು, ವಸಂತ್ ಬರ್ನಾಡ್ ಹಳೆಯಂಗಡಿ, ನವೀನ್ ಚಂದ್ರ ಶೆಟ್ಟಿ ಪಡುಬಿದ್ರಿ, ಆನೆಗುಂದಿ ಪ್ರತಿಷ್ಠಾನದ ಕೋಶಾಧಿಕಾರಿ ಅರವಿಂದ ವೈ, ಆಚಾರ್ಯ ಬೆಳುವಾಯಿ, ಅಸೆಟ್ ಅಧ್ಯಕ್ಷ ಬಿ. ಸೂರ್ಯಕುಮಾರ್ ಹಳೆಯಂಗಡಿ, ಮಾತೃ ಮಂಡಳಿ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ಆನೆಗುಂದಿ ಮೂಲ ಮಠದ ಅಧ್ಯಕ್ಷ ದಿನೇಶ್ ಆಚಾರ್ಯ ಪಡುಬಿದ್ರಿ, ಗುರುಸೇವಾ ಪರಿಷತ್ ಅಧ್ಯಕ್ಷ ಗಣೇಶ್ ಆಚಾರ್ಯ ಕೆಮ್ಮಣ್ಣು ಗೋವು ಟ್ರಸ್ಟ್ ನ ದಿನೇಶ್ ಆಚಾರ್ಯ ಕಿನ್ನಿಗೋಳಿ, ಪ್ರಮುಖರಾದ ತ್ರಾಸಿ ಸುಧಾಕರ ಆಚಾರ್ಯ, ವಿವೇಕ ಆಚಾರ್ಯ, ಜಯಕರ ಆಚಾರ್ಯ, ನಾಗರಾಜ ಆಚಾರ್ಯ, ರತ್ನಾಕರ ಆಚಾರ್ಯ, ಗುರುರಾಜ್ ಕೆ.ಜೆ., ರಾಘವೇಂದ್ರ ಆಚಾರ್ಯ, ಕೆ.ಎಂ. ಗಂಗಾಧರ ಆಚಾರ್ಯ, ಹರೀಶ್ ಆಚಾರ್ಯ, ಶೇಖರ ಆಚಾರ್ಯ, ಎಷ್ಟು ಆಚಾರ್ಯ, ಪ್ರವೀಣ್ ಆಚಾರ್ಯ, ನವೀನ್ ಆಚಾರ್ಯ, ಕೆ.ಎಂ. ಮಧುಸೂದನ ಆಚಾರ್ಯ, ಮಾತೃ ಮಂಡಳಿಯ ರಮಾ ನವೀನ್, ಕವಿತಾ ಹರೀಶ್, ದೀಪಾ ಸುರೇಶ್, ಚಂದ್ರಾವತಿ ಎಸ್. ಆಚಾರ್ಯ, ಸುಮಾ ಸುಧಾಕರ್, ಗೀತಾ ಚಂದ್ರ ಉಪಸ್ಥಿತರಿದ್ದರು. ಆನೆಗುಂದಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಆಚಾರ್ಯ ಕಂಬಾರು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.