ಬೆಳಗಾವಿಯಲ್ಲಿ ಯುವಕನ ಹತ್ಯೆ: ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ..!

  • Krishna Shinde
  • 15 Jan 2024 , 12:54 AM
  • Belagavi
  • 514

ಬೆಳಗಾವಿ :ಬೆಳಗಾವಿಯ ಶಿವ ಬಸವನಗರದಲ್ಲಿ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನ ಹತ್ಯೆ ಮಾಡುವ ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇಲ್ಲಿನ ರಾಮನಗರ ಗಾಡಿವಡ್ಡರ್ ನಿವಾಸಿ ನಾಗರಾಜ್ ಗಾಡಿವಡ್ಡರ್ ಎಂಬ ವ್ಯಕ್ತಿಯ ಹತ್ಯೆಯಾಗಿದೆ. ರಾತ್ರಿ ಮನೆಗೆ ನಡೆದುಕೊಂಡು ನಾಗರಾಜ್ ತೆರಳುವ ಮಾರ್ಗದಲ್ಲಿ ಮೊದಲೇ ಬೈಕ್ ಮೇಲೆ ಬಂದು ಮೂವರು ದುಷ್ಕರ್ಮಿಗಳು ನಿಂತಿದ್ದರು.

ನಾಗರಾಜ್ ಗಾಡಿವಡ್ಡರ್ ಅದೇ ಮಾರ್ಗದಲ್ಲಿ ಹಾದು ಹೋಗುವಾಗ ಬೈಕ್ ನಲ್ಲಿ ಬಂದಿದ್ದ ಮೂವರ ಪೈಕಿ ಮಧ್ಯದಲ್ಲಿ ಕುಳಿತವನಿಂದ ಹತ್ಯೆ ಮಾಡಲಾಗಿದೆ. ಮೊದಲೇ ಬೈಕ್ ನಲ್ಲಿ ಕಲ್ಲು ಸಮೇತ ಬಂದು ನಿಂತಿದ್ದ ಹಂತಕರು ಹಿಂಬದಿಯಿಂದ ನಾಗರಾಜ್ ತಲೆಗೆ ಹೊಡಿದಿದ್ದಾರೆ.

ನೆಲಕ್ಕೆ ಬಿಳ್ಳುತ್ತಿದ್ದಂತೆ ಐದು ಬಾರಿ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾರೆ.ಈ ಎಲ್ಲ  ದೃಶ್ಯ ಮನೆಯೊಂದರ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

Read All News