ಬೆಂಗಳೂರು :ಕರ್ನಾಟಕದಲ್ಲಿ ಸಿಎಂ ಸ್ಥಾನಕ್ಕಾಗಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಹಗ್ಗ ಜಗ್ಗಾಟ ನಡೆಯುತ್ತಿದೆ. ಸಿದ್ದರಾಮಯ್ಯನವರು ಸಿಎಂ ಹುದ್ದೆಗಾಗಿ ಹರಸಾಹಸ ನಡೆಸುತ್ತಿದ್ದಾರೆ, ಡಿ.ಕೆ.ಶಿವಕುಮಾರ್ ಕೂಡ ಈ ಹುದ್ದೆಗೆ ಹಿಂದೆ ಸರಿಯಲು ತಯಾರಿಲ್ಲ ಆದ್ದರಿಂದ ಕರ್ನಾಟಕದ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬುದಕ್ಕೆ ದೆಹಲಿಯಲ್ಲಿ ಮಂಥನ ನಡೆಯುತ್ತಿದೆ.
ಡಿಕೆ ಶಿವಕುಮಾರ್ ದೆಹಲಿಗೆ ತೆರಳುವ ಮುನ್ನ ಹೇಳಿಕೆ ನೀಡಿರುವ ಡಿಕೆ ಶಿವಕುಮಾರ್ "ನಾನು ಒಂಟಿ ಮನುಷ್ಯ, ಧೈರ್ಯವಿರುವ ಒಬ್ಬ ವ್ಯಕ್ತಿ ಬಹುಮತ ಪಡೆಯುತ್ತಾನೆ ಎಂಬ ಒಂದು ವಿಷಯದಲ್ಲಿ ನಾನು ನಂಬುತ್ತೇನೆ.ನಮ್ಮ ಎಲ್ಲಾ ಶಾಸಕರು ಪಕ್ಷವನ್ನು ತೊರೆದಾಗ ನಾನು ನನ್ನ ಧೈರ್ಯ ಕಳೆದುಕೊಳ್ಳಲಿಲ್ಲ." ಎಂದು ಕರ್ನಾಟಕ ಸಿಎಂ ಮಾತುಕತೆಗಾಗಿ ದೆಹಲಿಗೆ ತೆರಳುವ ಮುನ್ನ ಡಿಕೆ ಶಿವಕುಮಾರ್ ಹೇಳಿದ್ದಾರೆ.
ನಾವು ಒಂದೇ ಸಾಲಿನ ನಿರ್ಣಯವನ್ನು ಅಂಗೀಕರಿಸಿದ್ದೇವೆ. ನಮ್ಮಲ್ಲಿ 135 ಶಾಸಕರಿದ್ದು, ಎಲ್ಲರೂ ಒಮ್ಮತದಿಂದ ಮುಖ್ಯಮಂತ್ರಿ ನೇಮಕದ ನಿರ್ಧಾರವನ್ನು ಪಕ್ಷದ ಹೈಕಮಾಂಡ್‌ಗೆ ಬಿಟ್ಟಿದ್ದಾರೆ. ಕಾಂಗ್ರೆಸ್ ಪಕ್ಷದ ಮೂಲಕ ಕರ್ನಾಟಕಕ್ಕೆ ಸೇವೆ ಸಲ್ಲಿಸುವುದು ನನ್ನ ಗುರಿಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
#WATCH | "I'm a single man, I believe in one thing that a single man with courage becomes a majority...When all our MLAs left the party (2019 JD(S)-Cong coalition govt),I didn't lose my heart,"says K'taka Cong pres DK Shivakumar before he heads to Delhi for Karnataka CM talks. pic.twitter.com/83CMHHLmTQ
— ANI (@ANI) May 15, 2023