ದಾವಣಗೆರೆ- ಕಳಚಿದ ವೀರಶೈವ ಲಿಂಗಾಯತರ ಕೊಂಡಿ, 95 ವರುಷ ವಯಸ್ಸಿನ ಶಾಮನೂರು ಶಿವಶಂಕರೆಪ್ಪನವರು ಇಂದು ಸಂಜೆ 6.45 ಕ್ಕೆ ನಿಧನರಾದರು.
ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕರಾಗಿರುವ ಇವರನ್ನು ಕಳೆದುಕೊಂಡು ಲಿಂಗಾಯತ ಸಮುದಾಯ ಬಡವಾಗಿದೆ.
16 ಜನೇವರಿ 1930ರಲ್ಲಿ ಜನಿಸಿದ ಇವರು, ಅನುಭವಿ ಕಾಂಗ್ರೆಸ್ಸಿಗ. ವಯಸ್ಸು 95 ಆದರೂ ಕೂಡಾ ಯುವಕನ ಉತ್ಸಾಹ ಬತ್ತಿರಲಿಲ್ಲ, ಕಳೆದ 3 ದಶಕಗಳಿಂದ KPSC ಖಜಾಂಚಿಯಾಗಿ ಕರ್ತವ್ಯ ನಿರ್ವಹಿಸಿದ ಇವರು ಯಾವುದೇ ಕಪ್ಪು ಚುಕ್ಕೆ ಇಲ್ಲದೆ ರಾಜಕಾರಣ ಮಾಡಿದಂತಹ ವ್ಯಕ್ತಿ.
ಸಾದರ ಲಿಂಗಾಯತ ಸಮುದಾಯದ ಇವರು ಬಾಪುಜಿ ಶಿಕ್ಷಣ ಸಂಸ್ಥೆ, institute of engineering and technology ಸಂಸ್ಥೆಯನ್ನು ಸ್ಥಸಪಿಸಿ ಹಲವಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ. ಇಷ್ಟೇ ಅಲ್ಲದೇ ಅನೇಕ ವೃತ್ತಿಪರ ಯೋಜನೆಗಳ ರೂವಾರಿಯಾದ ಇವರು, ಸಕ್ಕರೆ ಮತ್ತು ಡಿಸ್ಟಲರಿಸ್ ಕ್ಷೇತ್ರಕ್ಕೂ ಲಗ್ಗೆ ಇಟ್ಟು ಅನೇಕರಿಗೆ ಉದ್ಯೋಗ ದೊರಕಿಸಿಕೊಟ್ಟಿದ್ದಾರೆ.
ಚಿತ್ರರಂಗದಲ್ಲಿಯೂ ಸಹ ತಮ್ಮ ಛಾಪನ್ನು ಮೂಡಿಸಿದ್ದ ಇವರು, ಸನ್ 1970 ರಲ್ಲಿ ತೆರೆಕಂಡ ಬೋರೆಗೌಡ ಬೆಂಗಳೂರಿಗೆ ಬಂದ ಎಂಬ ಸಿನಿಮಾ ನಿರ್ಮಾಣದಲ್ಲಿ ಸಹಾಯಕ ನಿರ್ಮಾಪಕರಾಗಿ ಸೇವೆ ಸಲ್ಲಿಸಿ ಯಶಸ್ಸುಗಳನ್ನು ಕೂಡ ಕಂಡಿದ್ದಾರೆ.
ಪ್ರಸ್ತುತ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಇಲಾಖೆಯ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರ ತಂದೆಯಾಗಿದ್ದು, ಸೊಸೆ ಡಾ. ಎಸ್ ಎಸ್ ಪ್ರಭಾ ಕೂಡಾ ಸಂಸದೆಯಾಗಿದ್ದಾರೆ.
ಲಿಂಗಾಯತ ಸಮಾಜದ ಅಭಿವೃದ್ಧಿಗೆ ಯಾವುದೇ ಕಪಟ ಮನೋಭಾವನೆ ಇಲ್ಲದೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ ಶಾಮನೂರು ಶಿವಶಂಕರಪ್ಪನವರ ನಿಧನ ಸಮಸ್ತ ಲಿಂಗಾಯತ ಸಮುದಾಯಕ್ಕೆ ನುಂಗಲಾರದ ತುತ್ತಾಗಿದೆ.
ಇಂತಹ ಮಹಾನ ವ್ಯಕ್ತಿಗಳು ಮತ್ತೆ ಹುಟ್ಡಿ ಬರಲಿ ಅಂತಾ ಎಲ್ಲರ ಆಶಯವಾಗಿದೆ.
ವರದಿಗಾರ : ರವಿಕಿರಣ್ ಯಾತಗೇರಿ