ಬಿಜೆಪಿಗೆ ಮನೆಯೊಂದು ಆರು ಬಾಗಿಲು ಎಂದ ಶಾಸಕ ಸವದಿ

  • Shivaraj Bandigi
  • 15 Jan 2024 , 12:19 AM
  • Belagavi
  • 153

ಅಥಣಿ :ಬಿಜೆಪಿ ಯದ್ದು ಮನೆಯೊಂದು ಆರು ಬಾಗಿಲು ಎಂದು ಶಾಸಕ ಲಕ್ಷ್ಮಣ್ ಸವದಿ ಲೇವಡಿ ಮಾಡಿದರು‌.

ಅಥಣಿಯಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು,  ಅಧಿವೇಶನ ನಡೆದು ಮೂರು ದಿನ ಕಳೆದರು ಬಿಜೆಪಿಗೆ ನಾಯಕತ್ವವದ ಕೊರದೆ ಇದೆ‌. ಕರಿಮಸೂತಿ ನೀರಾವರಿ ಯೋಜನೆಯ ಕಾಲುವೆಗೆ ನೀರು ಹರಿಸಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು‌.

ಬರದಿಂದ ತತ್ತರಿಸಿದ ಜನರಿಗೆ ಖುಷಿ ಹಂಚಿದ ಲಕ್ಷ್ಮಣ್ ಸವದಿ ಬಿಜೆಪಿ  ವಿರುದ್ಧ ಹರಿಹಾಯ್ದರು. ಬಿಜೆಪಿ ರಾಷ್ಟ್ರೀಯ ಪಕ್ಷ ವಿದ್ದರೂ 15 ಕಳೆದರು ವಿಪಕ್ಷ ನಾಯಕರ ಕೊರತೆ ಎದ್ದು ಕಾಣುತ್ತಿದೆ. ಬಿಜೆಪಿ ಪಕ್ಷದಲ್ಲಿ ಒಕ್ಕಟ್ಟಿಲ್ಲ  ಅದಕ್ಕೆ ಹೀನಾಯ ಸೋಲು ಕಂಡಿದೆ ಎಂದರು.

ಸಿದ್ದರಾಮಯ್ಯ ಬಜೆಟ್ ಹಂಚಿಕೆಯಲ್ಲಿ ಸರ್ವರಿಗೂ ಸಮಪಾಲು ಸಮಬಾಳು ನೀರಾವರಿಗೂ ಹೆಚ್ಚಿನ ಕೊಡುಗೆ ನೀಡಿದ್ದಾರೆ‌. ಅಥಣಿ ಹಾಗೂ ಕಾಗವಾಡ ತಾಲೂಕಿನ ನೀರಾವರಿ ಯೋಜನೆಗೆ ಹೆಚ್ಚಿನ ಒಲವು ನೀಡುವ ಭರವಸೆ ನೀಡಿದ್ದಾರೆ.

ಮುಂದಿನ ದಿನಗಳಲ್ಲಿ 30 ಸಾವಿರ ಕೋಟಿ ಬೆಳೆ ಸಾಲ ಕೊಡುವ ಭರವಸೆ ಇದೆ. ಒಟ್ಟಾರೆ ರಾಜ್ಯದ ಬಜೆಟ್ ಸಮಬಾಳು - ಸಮಪಾಲು ನೀಡಿದೆ ಎಂದರು.

Read All News